ಕೂಲಿಕಾರರು ಉದ್ಯೋಗ ಖಾತ್ರಿ ಲಾಭ ಪಡೆಯಿರಿ

ಚಿಟಗುಪ್ಪ:ಫೆ.5:ತಾಲೂಕಿನ ಉಡಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಉಡಬಾಳ ವಾಡಿ ಗ್ರಾಮದಲ್ಲಿ ನರೇಗಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷೆ ಅನುಸಯ್ಯ ಚಾಲನೆ ನೀಡಿದರು.ನರೇಗಾ ದಿನಾಚರಣೆ ನಿಮಿತ್ತ ಕೂಲಿ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಕೈಗೊಳ್ಳಲಾಗುತ್ತಿದ್ದು,ಪ್ರತಿಯೊಬ್ಬ ಕೂಲಿ ಕಾರ್ಮಿಕರು ಈ ಶಿಬಿರದ ಲಾಭ ಪಡೆದುಕೊಳ್ಳಬೇಕು.ಇದೀಗ ಬೇಸಿಗೆ ಕಾಲ ಪ್ರಾರಂಭಗೊಳ್ಳುವ ಸಮಯವಿದೆ,ಕೂಲಿ ಕಾರ್ಮಿಕರು ಕೂಲಿ ಕಲಸಕ್ಕೆ ಅಲೆದಾಟ ಮಾಡದೆ ತಮ್ಮ ಸ್ವಂತ ಗ್ರಾಮದಲ್ಲಿ ವಾಸಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಕೆಲಸ ಪಡೆದು ನೆಮ್ಮದಿಯ ಬದುಕು ಸಾಗಿಸುವ ಮುಖಾಂತರ ಈ ಯೋಜನೆ ಲಾಭ ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಂಧ್ಯಾರಾಣಿ,ಸಿಎಚ್ ಓ, ಕೆಎಚ್ ಪಿಟಿ ಸಂಯೋಜಕ ರಾಘು,ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ವಿಶ್ವನಾಥ ಗಡ್ಡಿಮನಿ,ಕಾರ್ಯದರ್ಶಿ ಶಂಕರ ಮಂಗಲಗಿ, ಜಗದೇವಿ,ಮಾಜಿ ಅಧ್ಯಕ್ಷ ನರಸಾರಡ್ಡಿ,ಮಾಣಿಕ ಮುದ್ದಾಳೆ, ಶಾಮುವೆಲ್,ದಯಾನಂದ,ಕಾಯಕ ಮಿತ್ರ ಪ್ರೀತಿ, ಆಶಾ ಕಾರ್ಯಕರ್ತೆಯರು ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.