ಕೂಲಿಕಾರರಿಗೆ ಖಾತ್ರಿ ಯೋಜನೆಯ ಬಗ್ಗೆ ಜಾಗೃತಿ ಸಭೆ

ದೇವದುರ್ಗ,ಮೇ.೧೯- ಹತ್ತಿರವಿರುವ ಚಿಂಚೋಡಿ ಗ್ರಾಮ ಪಂಚಾಯತಿಯ ಯರಗುಡ್ಡ ಗ್ರಾಮದಲ್ಲಿ ಗುರುವಾರ ಕೂಲಿಕಾರರೊಂದಿಗೆ ಕೃಷಿ ಕೂಲಿಕಾರ್ಮಿಕರ ಸಂಘಟನೆಯ ಜಿಲ್ಲಾ ಮತ್ತು ತಾಲ್ಲೂಕು ಸಮಿತಿ ಮುಖಂಡರಿಂದ ಕೃಷಿ ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಜಾಗೃತಿ ಸಭೆ ಮಾಡಲಾಯಿತು.
ತಾಲ್ಲೂಕು ಸಮಿತಿ ಅಧ್ಯಕ್ಷ ಲಿಂಗಣ್ಣ ಮಕಾಶಿ ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನ ಕೂಲಿಗಾಗಿ ದೂರದ ನಗರಗಳಿಗೆ ಹೋಗಬಾರದೆಂದು ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಪ್ರತಿ ಕುಟುಂಬಕ್ಕೆ ೧೦೦ದಿನಗಳ ಕೆಲಸವನ್ನು ಸರ್ಕಾರ ನೀಡಲಾಗುತ್ತದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಕೆಲಸ ಮಾಡುವ ಮೂಲಕ ಕೂಲಿಯನ್ನು ಪಡಡದು ಸ್ವಾವಲಂಬಿ ಜೀವನ ಮಾಡಬೇಕು ಎಂದು ಸಲಹೆ ನೀಡಿ ನೀಡಿದರು.
ಸರ್ಕಾರದ ಯೋಜನೆಯನ್ನು ಪಡೆಯಲು ಕೂಲಿಕಾರ್ಮಿಕರು ಒಂದಾಗಬೇಕು ಜೊತೆಗೆ ಒಗ್ಗಟ್ಟಾಗುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೂಲಿಕಾರ್ಮಿಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಹುಲಿಗೇಪ್ಪಗೌಡ ಪೋಲಿಸ್ ಪಾಟೀಲ್, ತಾಲ್ಲೂಕು ಅಧ್ಯಕ್ಷ ಲಿಂಗಣ್ಣ ಮಕಾಶಿ,ತಾಲ್ಲೂಕು ಸಮಿತಿ ಸದಸ್ಯ ದೇವರಾಜ, ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಮೂಲಿಮನಿ ಹಾಗೂ ಮೇಟಿ ದೇವರಾಜ ನಾಯಕ ಸೇರಿದಂತೆ ಕೂಲಿಕಾರ್ಮಿಕರು ಇದ್ದರು.