ಕೂಡ್ಲೂರು ಗ್ರಾಮದಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ ಯಶಸ್ವಿ

ಚಾಮರಾಜನಗರ, ಜ.06- ತಾಲೂಕಿನ ಚಾ.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೂಡ್ಲೂರು ಗ್ರಾಮದ 37ನೇ ಬೂತ್‍ನಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದ ಯಶಸ್ವಿಯಾಗಿ ನಡೆಯಿತು.
ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಗ್ರಾಮದ ಮುಖ್ಯ ದ್ವಾರದಿಂದ ರಾಮಮಂದಿರ ವರೆಗೆ ಬ್ಯಾಂಡ್‍ಸೆಡ್, ಬಿಜೆಪಿ ಬಾವುಟಗಳನ್ನು ಹಿಡಿದು ಮೆರವಣಿಗೆಯಲ್ಲಿ ರಾಮಮಂದಿರಕ್ಕೆ ಬರಲಾಯಿತು. ಅಲ್ಲಿನ ನಡೆದ ಬೂತ್ ವಿಜಯ ಅಭಿಯಾನದಲ್ಲಿ ಬೂತ್ ಅಧ್ಯಕ್ಷರು, ಪ್ರಭಾರಿಗಳು, ಬೂತ್ ಸಮಿತಿಯ ಸದಸ್ಯರು ಸೇರಿ 28 ಮಂದಿ ಪೇಜ್ ಪ್ರಮುಖರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಕೂಡ್ಲುರು ಗ್ರಾಮದ ಬೂತ್ ನಂ37 ರಲ್ಲಿ ಇಂದು ಬಿಜೆಪಿ ಬೂತ್ ವಿಜಯ ಅಭಿಯಾನ ನಡೆಸಿ, ಪ್ರಮುಖರನ್ನು ಆಯ್ಕೆ ಮಾಡಲಾಗಿದೆ. ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಮೇರ್ ಬೂತ್ ಮಜುಬೂತ್ ಎಂಬ ಘೋಷಾ ವಾಕ್ಯದೊಂದಿಗೆ ಬಿಜೆಪಿಯನ್ನು ಸದೃಢವಾಗಿ ಸಂಘಟನೆ ಮಾಡಿ, ನಮ್ಮ ಬೂತ್ ಬಿಜೆಪಿಗೆ ಬಲಿಷ್ಠವಾಗಿದೆ ಎಂದು ಸಾಬೀತು ಪಡಿಸಲು ಈ ಅಭಿಯಾನ ಬಹಳ ಮಹತ್ವವನ್ನು ಪಡೆದುಕೊಂಡಿದೆ ಎಂದರು.
ಇದೇ ರೀತಿ ಚಾಮರಾಜನಗರ ಕ್ಷೇತ್ರದ 239 ಬೂತಗಳನ್ನು ಸದೃಡಗೊಳಿಸುವ ಕಾರ್ಯವು ಜ. 2 ರಿಂದ ಜ. 12 ರವರೆಗೆ ನಡೆಯಲಿದ್ದು, ಬಿಜೆಪಿ ಎಲ್ಲಾ ಪ್ರಮುಖರು ಅವಿರತವಾಗಿ ಶ್ರಮಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ದೇಶ ಮತ್ತು ರಾಜ್ಯದ ಅಭಿವೃದ್ದಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಬೂತ್ ಮಟ್ಟದಲ್ಲಿ ಪ್ರತಿ ಮತದಾರರಿಗೂ ಮನವರಿಕೆ ಮಾಡಿಕೊಟ್ಟು ಮತ್ತೇ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬೂತ್ ವಿಜಯ ಅಭಿಯಾನ ಪರಿಣಾಮಕಾರಿಯಾಗಿದೆ ಎಂದರು.
ಕಳೆದ 60 ವರ್ಷಗಳ ಕಾಂಗ್ರೆಸ್ ಆಡಳಿತ ನಡೆದ ಭ್ರಷ್ಟಾಚಾರ, ಸ್ವಜನ ಪಕ್ಷಾಪಾತ, ಭಯೋತ್ಪಾದನೆ ವಿರುದ್ದ ದೇಶದ ಜನರು ಬೇಸತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರ ತಂದ ಬಳಿಕ ದೇಶದ ಅಭಿವೃದ್ದಿ ಶರವೇಗದಲ್ಲಿ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ಮಾಡಿರುವ ಪ್ರತಿ ಮತದಾರರಿಗೂ ಮನಮುಟ್ಟುವಂತೆ ಇದೆ. ಉಜ್ವಲ ಯೋಜನೆ, ಕಿಸಾನ್ ಸಮ್ನಾನ್, ಫಸಲ್ ಬೀಮಾ, ಜಲ ಜೀವನ ಮಿಷನ್, ಜನಧನ್, ಅನ್ನ ಭಾಗ್ಯ, ಬೆಳಕು ಸೇರಿದಂತೆ ಹತ್ತಾರು ಯೋಜನೆಗಳು ಕೇಂದ್ರದಲ್ಲಿ ಜಾರಿಯಾಗಿ ದೇಶದ ಕಟ್ಟಕಡೆಯ ವ್ಯಕ್ತಿಗೂ ನೇರವಾಗಿ ತಲುಪುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಸಿಎಂ. ಬಸವರಾಜು ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ವಿದ್ಯಾಸಿರಿ, ಅಮೃತ ಜ್ಯೋತಿ, ಪಶು ಭಾಗ್ಯ, ಕ್ಷೀರಿ ಭಾಗ್ಯ, ರೈತ ನಿಧಿ ಹತ್ತು ಹಲವಾರು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ಯೋಜನೆಗಳು ಜನಮಾನಸದಲ್ಲಿ ಉಳಿದುಕೊಂಡಿದೆ. ಇಂಥ ಸರ್ಕಾರವನ್ನು ಮತ್ತೇ ರಾಜ್ಯದಲ್ಲಿ ಸ್ಥಾಪನೆ ಮಾಡುವ ಜೊತೆಗೆ ಚಾಮರಾಜನಗರ ಕ್ಷೇತ್ರದಲ್ಲಿಯು ಈ ಬಾರಿ ಬಿಜೆಪಿ ಹೆಚ್ಚಿನ ಬಹುಮತದಲ್ಲಿ ಗೆಲುವು ಸಾಧಿಸಿ, ಕಮಲವನ್ನು ಕ್ಷೇತ್ರದ ಮತದಾರರು ಅರಳಿಸಲಿದ್ದಾರೆ ಎಂದು ಕಾಡಾ ಅಧ್ಯಕ್ಷ ನಿಜಗುಣರಾಜು ವಿಶ್ವಾಸ ವ್ಯಕ್ತಪಡಿಸಿದರು.
ಅಭಿಯಾನದಲ್ಲಿ ಜಿ.ಪಂ. ಮಾಜಿ ಸದಸ್ಯ ಸಿ.ಎನ್. ಬಾಲರಾಜು, ಟ್ರಕ್ ಟ್ರರ್ಮಿನಲ್ ಮಾಜಿ ಅಧ್ಯಕ್ಷ ಹನುಮಂತಶೆಟ್ಟಿ, ಬೂತ್ ಅಧ್ಯಕ್ಷ ಮಧುಸೂಧನ್ ಪದಾಧಿಕಾರಿಗಳು ಹಾಗು ಗ್ರಾಮಸ್ಥüರು ಉಪಸ್ಥಿತರಿದ್ದರು.