ಕೂಡ್ಲಿಗಿ : 116ಮಂದಿ ಮತಚಲಾವಣೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.3 :- ವಿಧಾನಸಭಾ ಕ್ಷೇತ್ರದಲ್ಲಿ 80ವರ್ಷ ಮೇಲ್ಪಟ್ಟ ವೃದ್ದರು ಹಾಗೂ ಅಂಗವೈಕಲ್ಯವಿರುವ ಮತದಾರರು ಮತಗಟ್ಟೆ ಹೋಗಿ ಮತಚಲಾಯಿಸಲು ಆಗದೇ ಇರುವ 118 ಮಂದಿ ನೊಂದಾಯಿತ ಮತದಾರರಲ್ಲಿ 116 ಮಂದಿ ಮತಚಲಾಯಿಸಿದರು.
6 ತಂಡಗಳು ಕ್ಷೇತ್ರದಲ್ಲಿ ನೋಂದಾಯಿತ 118ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಿಕೊಂಡು ಬಂದಿದ್ದು  ಇಬ್ಬರು ಮೃತಪಟ್ಟಿರುವ ಬಗ್ಗೆ ಅವರ ಮರಣ ಪ್ರಮಾಣ ಪತ್ರ ಸಹ ತಂದಿದ್ದಾರೆ
ಸೆಕ್ಟರ್ ಅಧಿಕಾರಿ  ಬಿ ಆರ್ ಸಿ ಕೋ ಆರ್ಡಿನೇಟರ್ ಜಗದೀಶ, ಗುಡೇಕೋಟೆ ಕಂದಾಯ ನಿರೀಕ್ಷಕ ಚೌಡಪ್ಪ ಹೊನ್ನಾಳ,  ಎಂ ಬಿ ಅಯ್ಯನಹಳ್ಳಿ ಗ್ರಾಮ ಆಡಳಿತ ಅಧಿಕಾರಿ ಟಿ ವೀರೇಶ್  ಹಾಗೂ ಪೋಲಿಸ್ ಸಿಬ್ಬಂದಿ ಕಡಾಕೊಳ್ಳ ಗ್ರಾಮದ ವೃದ್ಧರೊಬ್ಬರ ಮನೆಗೆ ತೆರಳಿ ಮತದಾನ ಪಡೆಯುವುದರಲ್ಲಿ ಮುಂದಾಗಿದ್ದರು.