ಕೂಡ್ಲಿಗಿ ಸೆಂಟ್ ಮೈಕಲ್ ಶಾಲೆಗೆ,  13ವರ್ಷದಿಂದ ಶೇ100ರಷ್ಟು ಎಸ್ ಎಸ್ ಎಲ್ ಸಿ ಫಲಿತಾಂಶ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ. 9 :- ಪಟ್ಟಣದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಕೂಡ್ಲಿಗಿ ಸೆಂಟ್ ಮೈಕಲ್ ಶಾಲೆ ಈ ಬಾರಿಯೂ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ  ಶೇ 100ರಷ್ಟು ಫಲಿತಾಂಶ ಪಡೆದಿದ್ದು ಸತತ 13ವರ್ಷದಿಂದ ಶೇ 100ರಷ್ಟು ಫಲಿತಾಂಶದ ಹಿರಿಮೆಯನ್ನು ಮೆರೆಸಿದೆ.
ಈ ಪ್ರತಿಷ್ಠಿತ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 51ಮಕ್ಕಳು ಪರೀಕ್ಷೆಗೆ ಕುಳಿತಿದ್ದು ಆದರಲ್ಲಿ ಅನಿಕಾ ರಶ್ಮಿ ರಾಮಘಡ್ 625ಕ್ಕೆ 606ಅಂಕ, ಸಾನಿಕ ಪಿ 603ಅಂಕ, ಹಾಗೂ ಎಂ ಎನ್ ಸ್ನೇಹ 600ಅಂಕಗಳನ್ನು ಪಡೆದುಕೊಂಡಿದ್ದಾರೆ ಅಲ್ಲದೆ ಶಾಲೆಗೆ ಕೀರ್ತಿ ತಂದಿದ್ದಾರೆ . ಒಟ್ಟು 51ವಿದ್ಯಾರ್ಥಿಗಳಲ್ಲಿ 36ವಿದ್ಯಾರ್ಥಿಗಳು  ಡಿಸ್ಟಿಂಕ್ಷನ್ ನಲ್ಲಿ ಮತ್ತು 15ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದು ಈ ಬಾರಿಯೂ  ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಮತ್ತು ಕೂಡ್ಲಿಗಿ ಸೆಂಟ್ ಮೈಕಲ್ ಶಾಲೆಯು ಸತತ 13ವರ್ಷದಿಂದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇ 100ರಷ್ಟು ಫಲಿತಾಂಶ ದೊರೆತಿದ್ದು ಶಾಲೆಯ ಮುಖ್ಯಸ್ಥರಾದ ಆನಂದ ಪ್ರಸಾದ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಹಾಗೂ ಗುರುವೃಂದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.