
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 5 :- ಕೂಡ್ಲಿಗಿಯ ನೂತನ ಸಿಪಿಐಯಾಗಿ ಸುರೇಶ ತಳವಾರ ನಿನ್ನೆ ಮಧ್ಯಾಹ್ನ ಕೂಡ್ಲಿಗಿ ಸಿಪಿಐ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದರು.
ಈ ಹಿಂದೆ ಕೂಡ್ಲಿಗಿ ಸಿಪಿಐಯಾಗಿದ್ದ ವಸಂತ ವಿ ಅಸೋದೆ ಅವರು ಸರ್ಕಾರದ ಪೊಲೀಸ ಇಲಾಖೆಯ ವರ್ಗಾವಣೆ ಆದೇಶದಂತೆ ಮೊಳಕಾಲ್ಮುರು ಸಿಪಿಐಯಾಗಿ ವರ್ಗಾವಣೆಯಾಗಿದ್ದರಿಂದ ಅವರ ಸ್ಥಾನಕ್ಕೆ ಕಂಪ್ಲಿ ಪಿಐಯಾಗಿದ್ದ ಸುರೇಶ ತಳವಾರ ಸರ್ಕಾರದ ಆದೇಶದಂತೆ ಶುಕ್ರವಾರ ಮಧ್ಯಾಹ್ನ ಕೂಡ್ಲಿಗಿ ಸಿಪಿಐ ಕಚೇರಿಗೆ ಬಂದು ಅಧಿಕಾರ ವಹಿಸಿಕೊಂಡರು. ಕೂಡ್ಲಿಗಿ ಪಿಎಸ್ಐ ಧನುಂಜಯ ಅವರು ನೂತನ ಸಿಪಿಐ ಸುರೇಶ ತಳವಾರ ಅವರಿಗೆ ಸ್ವಾಗತ ಕೋರಿ ಹೂಗುಚ್ಛ ನೀಡಿ ಮತ್ತು ಶಾಲು ಹಾಕಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು ಮತ್ತು ಕೂಡ್ಲಿಗಿ ಪಟ್ಟಣದ ಮುಖಂಡರು ಹಾಗೂ ತಾಲೂಕಿನ ಜನಪ್ರತಿನಿದಿಗಳು ಸಂಜೆಯವರೆಗೂ ಆಗಮಿಸಿ ನೂತನ ಸಿಪಿಐ ಸುರೇಶ ತಳವಾರ ಅವರಿಗೆ ಅಭಿನಂದನೆ ಸಲ್ಲಿಸಿದರು.
ನೂತನ ಸಿಪಿಐ ಸುರೇಶ ತಳವಾರ ಸತತ 20ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದು ಗಂಗಾವತಿ ಗ್ರಾಮೀಣ ಠಾಣೆ ಸೇರಿದಂತೆ ಇತರೆಡೆ ಕರ್ತವ್ಯ ನಿರ್ವಹಿಸಿದ ಖಡಕ್ ಅಧಿಕಾರಿ ಎಂದು ತಿಳಿದಿದೆ.