ಕೂಡ್ಲಿಗಿ : ಸಿಡಿಲಿಗೆ ಎತ್ತುಗಳು ಬಲಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.12 :- ಗುಡುಗು ಸಹಿತ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಆಕಸ್ಮಿಕ ಸಿಡಿಲು ಬಡಿದು ಕಣದಲ್ಲಿದ್ದ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕುದುರೆಡುವು ಗೊಲ್ಲರಹಟ್ಟಿಯಲ್ಲಿ ನಿನ್ನೆ  ಸಂಜೆ ಜರುಗಿದೆ. 
ಗುರುವಾರ ಸಂಜೆ  ತಾಲೂಕಿನ ನಾನಾ ಕಡೆ ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಕುದುರೆಡುವು ಗೊಲ್ಲರಹಟ್ಟಿ ಗ್ರಾಮದ ಸಣ್ಣ ರಾಜಪ್ಪ ಎಂಬುವವರಿಗೆ ಸೇರಿದ್ದ ಎರಡು ಎತ್ತುಗಳನ್ನು ಕಣದಲ್ಲಿನ ಮರದ ಕೆಳಗೆ ಕಟ್ಟಿ ಹಾಕಿದ್ದ ಸಂದರ್ಭ ಸಿಡಿಲು ಬಡಿದಿದ್ದು ಸ್ಥಳದಲ್ಲೇ ಆ ಎತ್ತುಗಳು ಮೃತಪಟ್ಟಿವೆ. ಘಟನಾ ಸ್ಥಳಕ್ಕೆ ಗುಡೇಕೋಟೆ ಹೋಬಳಿಯ  ಕಂದಾಯ ನಿರೀಕ್ಷಕ ಚೌಡಪ್ಪ, ಗ್ರಾಮ ಲೆಕ್ಕಿಗ ಮರುಳಸಿದ್ದಪ್ಪ ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ಕೂಡ್ಲಿಗಿ ತಹಸೀಲ್ದಾರ್ ಗೆ ಸಲ್ಲಿಸಿದ್ದಾರೆ.