
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.9 :- ಕಣದಲ್ಲಿ ಕಟ್ಟಿದ್ದ ಆಕಳೊಂದಕ್ಕೆ ಸೋಮವಾರ ಸಂಜೆ ಆಕಸ್ಮಿಕ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಳಗಟ್ಟ ಸಮೀಪದ ಸಂಕ್ಲಾಪುರ ಗ್ರಾಮದಲ್ಲಿ ಜರುಗಿದೆ.
ಸಂಕ್ಲಾಪುರ ಗ್ರಾಮದ ಚನ್ನಪ್ಪ ಎನ್ನುವವರಿಗೆ ಸೇರಿದ ಈ ಆಕಳು 50ಸಾವಿರಕ್ಕೂ ಹೆಚ್ಚು ಬೆಲೆ ಬಾಳುತ್ತಿದ್ದು ನಿನ್ನೆ ಸಂಜೆ ಹವಾಮಾನ ವೈಪರೀತ್ಯದಿಂದ ಸುರಿದ ಮಳೆಯಲಿ ಬಡಿದ ಸಿಡಿಲ ರಭಸಕ್ಕೆ ಕಣದಲ್ಲಿ ಕಟ್ಟಿಹಾಕಿದ್ದ ಆಕಳು ಬಲಿಯಾಗಿದೆ. ತಕ್ಷಣ ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ನಾಗವೇಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದಾರೆ ಎಂದು ಕಂದಾಯ ಇಲಾಖೆಯ ಕಚೇರಿ ಮೂಲಗಳಿಂದ ತಿಳಿದುಬಂದಿದೆ.