ಕೂಡ್ಲಿಗಿ ಸಾರಿಗೆ ಸಂಸ್ಥೆ ಅಧಿಕಾರಿಗೆ ಗ್ರಾಮಸ್ಥರಿಂದ ತರಾಟೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 22 :- ಶಾಲಾಮಕ್ಕಳಿಗೆ ಸರಿಯಾಗಿ ಬಸ್ ಒದಗಿಸುವಲ್ಲಿ ಸಾರಿಗೆ ಸಂಸ್ಥೆ ನಿರ್ಲಕ್ಷ್ಯ ತೋರುತ್ತಿದ್ದು ಇದನ್ನು ಸರಿಪಡಿಸಬೇಕು ಎಂದು ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸಿದ ಸಾರಿಗೆ ಸಂಸ್ಥೆ ಅಧಿಕಾರಿ ಮಂಜುನಾಥರನ್ನು ಶಿವಪುರ, ಗೊಲ್ಲರಹಟ್ಟಿ ಹಾಗೂ ಜಂಗಮಸೋವೇನಹಳ್ಳಿ ಗ್ರಾಮದ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.
ಶಿವಪುರ ಜಂಗಮಸೋವೆನಹಳ್ಳಿ  ಶಿವಪುರಗೊಲ್ಲರಟ್ಟಿ ಕೈವಲ್ಯಾಪುರ ಗ್ರಾಮದವರು  ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾದ ಸಾರಿಗೆ ಅಂದರೆ ಮಾರ್ಗ ಸಂಖ್ಯೆ 27 ನ ಹಗರಿಬೊಮ್ಮನಹಳ್ಳಿ ಕೂಡ್ಲಿಗಿ (ನಾಣ್ಯಪುರ-ಶಿವಪುರ) ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸುಗಳ ಪುನಃ ಸಂಚಾರ ಮಾಡಲು ಅನೇಕ ಬಾರಿ ಘಟಕ ವ್ಯವಸ್ಥಾಪಕರು ಕೂಡ್ಲಿಗಿ ವಿಭಾಗದವರ ಮೂಲಕ ವಿಭಾಗಿಯ ನಿಯಂತ್ರಣಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದು  ಯಾವುದೇ ಪ್ರಯೋಜನವಾಗಿಲ್ಲ ಆದಕಾರಣ ತಾವುಗಳು ವಿಶೇಷ ಮತುವರ್ಜಿವಹಿಸಿ ಈ ಭಾಗದ ಬಡ ಹಾಗೂ ಮಧ್ಯಮ ಜನರ ಅತ್ಯವಶ್ಯಕ ಕೃಷಿ ಆರೋಗ್ಯ ಶೈಕ್ಷಣಿಕ ಇನ್ನಿತರ ಸಂಬಂಧಿಸಿದ ವ್ಯವಹಾರಗಳಿಗೆ ಅವಳಿ ಪಟ್ಟಣಗಳಂತೆ ಇರುವ ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಪಟ್ಟಣಗಳನ್ನ ಸಂಪರ್ಕಿಸಲು ಈ ಗ್ರಾಮಗಳ ಜನತೆಗೆ ಸಾರಿಗೆ ಬಸ್ ಅನಿವಾರ್ಯವಾಗಿದ್ದು ಕೂಡಲೇ ತಾವುಗಳು ಕೋವಿಡ್ ಪೂರ್ವದಲ್ಲಿ ಸಂಚರಿಸುತ್ತಿದ್ದ ಬಸ್ ಸಂಚಾರ ಮಾಡುತ್ತಿದ್ದಂತೆ ಯಥಾ ಪ್ರಕಾರ ಈ ಕೆಳಕಂಡಂತೆ ಸೂಚಿಸಿದಂತೆ ಮೊದಲು ಕಾರ್ಯ ಮಾಡುತ್ತಿತ್ತು ಯಥಾ ಪ್ರಕಾರ ಈ ಕೆಳಕಂಡಂತೆ ಬಸ್ ಸಂಚರಿಸುವಂತೆ ಸೂಚಿಸಬೇಕು ಹಾಗು ಕೂಡ್ಲಿಗಿ ಯಿಂದ ಹೊಸಪೇಟೆ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ಸುಗಳು  ಗ್ರಾಮದೊಳಗೆ ನಿಲುಗಡೆ ಮಾಡದೆ ಪ್ಲೈ ಓವರ್ ರಸ್ತೆಯಲ್ಲಿಯೇ ಸಂಚಾರ ಮಾಡುತ್ತಿದ್ದು ಅದ್ದರಿಂದ ಈ ಭಾಗದ ಸುತ್ತಮುತ್ತಲಿನ  ಗ್ರಾಮಗಳಿಗೆ ಬಹಳ ತೊಂದರೆಯಾಗಿದ್ದು ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಿವಪುರದಲ್ಲಿ ನಿನ್ನೆ ನೆಡೆದ ಜಿಲ್ಲಾಧಿಕಾರಿಗಳ ನಡೆಗೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಅದಿಕಾರಿಗಳಿಗೆ ಈ ಭಾಗದ ಶಿವಪುರ ಜಂಗಮಸೋವೇನಹಳ್ಳಿ ಕೈವಲ್ಯಾಪುರ ಶಿವಪುರ ಗೊಲ್ಲರಹಟ್ಟಿ ನಾಣ್ಯಪುರ ಜನತೆ ಸಾರಿಗೆ ಅಧಿಕಾರಿಗಳಿಗೆ ತೀವ್ರ  ತರಾಟೆಗೆ ತೆಗೆದುಕೊಂಡರು ನಂತರ ಸಾರಿಗೆ ಸಂಸ್ಥೆ ಅಧಿಕಾರಿ ವಾರದೋಳಗೆ ಸೂಕ್ತ ಕ್ರಮ ತೆಗೆದುಕೊಂಡು ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.