ಕೂಡ್ಲಿಗಿ ಸರ್ಕಾರಿ ಕಾಲೇಜಿನ ಸಮಸ್ಯೆ ಆಲಿಸಿ, ಇತ್ಯಾರ್ಥದ ಭರವಸೆ ನೀಡಿದ  ಕೂಡ್ಲಿಗಿ ಶಾಸಕ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 22 :- ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ  ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ, ಉಪನ್ಯಾಸಕರ ಕೊರತೆ, ಭರ್ತಿಯಾಗದೆ ಖಾಲಿ ಇರುವ ಭೋಧಕೇತರ ಹುದ್ದೆಗಳು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗಲಾಯ, ಗ್ರಂಥಾಲಯ,ಗ್ರಾಮೀಣ ಮಕ್ಕಳಿಗೆ ಬಸ್ಸಿನ ಕೊರತೆ ಹಾಗೂ ಕಾಲೇಜಿನ ಆವರಣದಲ್ಲಿರುವ ಬಿ ಆರ್ ಸಿ ಕಚೇರಿ ಸ್ಥಳಾಂತರ  ಸೇರಿದಂತೆ ಸಮಸ್ಯೆಗಳ ಸರಮಾಲೆಗೆ ಹಂತಹಂತವಾಗಿ ಈಡೇರಿಸುವ ಭರವಸೆಯನ್ನು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ  ನೀಡಿದರು.
ಅವರು ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 9ನೇ ವಿಶ್ವ ಯೋಗದಿನಾಚರಣೆಯಲ್ಲಿ ಭಾಗವಹಿಸಿ ನಂತರ ಕಾಲೇಜಿನ ಪ್ರಾಚಾರ್ಯರ ಕೊಠಡಿಯಲ್ಲಿ  ಉಪನ್ಯಾಸಕರ ಜೊತೆ ಮಾತನಾಡುತ್ತ  ಇಲ್ಲಿನ ಸಮಸ್ಯೆಗಳನ್ನು ಆಲಿಸಿ ನಂತರ ಪರಿಶೀಲನೆ ನಡೆಸಿದ ಶಾಸಕರಿಗೆ ತಿಳಿದದ್ದು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಎಲ್ಲಾ ವಿಭಾಗದಲ್ಲಿ ಸುಮಾರು 1300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿ ಇದೆ ಹಿಂದುಳಿದ ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಬಡ ಮಕ್ಕಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದೆ. ಬೋಧಕೇತರ ಹುದ್ದೆಗಳಾದ ಗ್ರಂಥಪಾಲಕರು, ಕಂಪ್ಯೂಟರ್ ಶಿಕ್ಷಕರು, ಡಿ ಗ್ರೂಪ್,  ಕಚೇರಿ ಅಟೆಂಡರ್ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇವೆ ಇವುಗಳ ಭರ್ತಿಯಾಗಬೇಕು ಅಲ್ಲದೆ ಗ್ರಾಮೀಣ ಭಾಗದ ಮಕ್ಕಳಿಗೆ ನಿಗಧಿತ ಶಾಲಾ ಸಮಯಕ್ಕೆ ಬಸ್ಸುಗಳು ಬಾರದೆ ಇದ್ದು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂಬಿತ್ಯಾದಿ ಸಮಸ್ಯೆ ಆಲಿಸಿದ ಶಾಸಕ ಡಾ ಶ್ರೀನಿವಾಸ ನೀವು ಹೇಳಿದ ಬೇಡಿಕೆಗಳು ಈಡೇರಿಸುವುದು ನನ್ನ ಆದ್ಯ ಕರ್ತವ್ಯವಾಗಿದ್ದು ಹಂತಹಂತವಾಗಿ ಕಾಲೇಜಿನ ಸಮಸ್ಯೆಗೆ ನಾಂದಿ ಹಾಡಿ ಇತ್ಯರ್ಥಗೊಳಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ ಕೊತ್ಲಮ್ಮ ಹಾಗೂ ಉಪನ್ಯಾಸಕರಾದ ಗೌಡ್ರು ಬಸವರಾಜ, ಶ್ರೀನಿವಾಸ, ರಾಜಾಭಕ್ಷಿ, ರಾಘವೇಂದ್ರ, ವಿಕ್ಕಿ, ಸುಮಾ ಸೇರಿದಂತೆ ಇತರರಿದ್ದರು.

One attachment • Scanned by Gmail