ಕೂಡ್ಲಿಗಿ ಶ್ರುತಿಗೆ ಪಿಹೆಚ್ ಡಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ.16 :-ಪಟ್ಟಣದ ಎಂ ಶ್ರುತಿ ಅವರಿಗೆ   ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ  ಇತ್ತೀಚಿಗೆ ನಡೆದ ಘಟಿಕೋತ್ಸವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಹೆಚ್ ಡಿ ಪ್ರಧಾನ ನೀಡಿ  ಗೌರವಿಸಿದೆ.
 ಕೂಡ್ಲಿಗಿ ಪಟ್ಟಣದ ಎಂ. ಶೃತಿಯವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ, ಜಾನಪದ ಅಧ್ಯಯನ ವಿಭಾಗಕ್ಕೆ ಸಲ್ಲಿಸಿದ  “ವಿಜಯನಗರ ಜಿಲ್ಲೆಯ ವೃದ್ಧ ಮಹಿಳೆಯರ ಸಮಸ್ಯೆಗಳು ಮತ್ತು ಸವಾಲುಗಳು” ಒಂದು ಸಮಾಜಶಾಸ್ತ್ರೀಯ ಅಧ್ಯಯನ (ವಿಜಯನಗರ ಜಿಲ್ಲೆಯ ಆಯ್ದು ತಾಲೂಕುಗಳನ್ನು ಅನುಲಕ್ಷಿಸಿ) ಎಂಬ ವಿಷಯಕ್ಕೆ  ಡಾ. ಬಸವರಾಜ ಎ.ಡಿ.  ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು ಅಧ್ಯಯನ ಪೂರ್ಣಗೊಸಿದ್ದಾರೆ.
 ವಿಜಯನಗರ ಜಿಲ್ಲೆ ಕೂಡ್ಲಿಗಿ  ನಿವಾಸಿಗಳಾದ ದಿ. ಎಂ ವಿರೂಪಾಕ್ಷಪ್ಪ, ಶ್ರೀಮತಿ ಎಂ. ಈರಮ್ಮ ಎಂಬ  ದಂಪತಿಗಳ ಪುತ್ರಿಯಾದ ಎಂ. ಶೃತಿ ಅವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿಗೆ ಭಾಜನರಾಗಿದ್ದಾರೆ. ಇವರ ಈ ಸಾಧನೆಗೆ ಬಂಧು ಮಿತ್ರರು ಕುಟುಂಬ ವರ್ಗವು ಅಭಿನಂದನೆ ತಿಳಿಸಿದೆ.