ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಮತದಾನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.7 :- ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆಯಿಂದಲೇ ಪ್ರಾರಂಭವಾಗಿದ್ದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಶ್ರೀನಿವಾಸ ಎನ್ ಟಿ ಅವರು ತಮ್ಮ ತಾಯಿ ಹಾಗೂ ಪತ್ನಿಯೊಂದಿಗೆ ಮತಕೇಂದ್ರಕ್ಕೆ ತೆರಳಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ತಾಲೂಕಿನ ನರಸಿಂಹಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಮತಗಟ್ಟೆ ಸಂಖ್ಯೆ 86ಕ್ಕೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ. ತಮ್ಮ ತಾಯಿ ಓಬಮ್ಮ ಎನ್ ಟಿ ಬೊಮ್ಮಣ್ಣ ಮತ್ತು ಪತ್ನಿ ಡಾ ಪುಷ್ಪಾ ಶ್ರೀನಿವಾಸ ಅವರೊಂದಿಗೆ ತೆರಳಿ ತಮ್ಮ ಸಂವಿಧಾನಿಕ ಹಕ್ಕಾದ ಮತದಾನವನ್ನು ಚಲಾಯಿಸಿ ಕ್ಷೇತ್ರದ ಜನತೆ ಸಹ ತಮ್ಮ ಮತದಾನದ ಹಕ್ಕನ್ನು ತಪ್ಪದೆ ಚಲಾಯಿಸಿ ಎಂದು ನನ್ನ ಮತ ನನ್ನ ಹಕ್ಕು ಎನ್ನುವ ನಿಟ್ಟಿನಲ್ಲಿ  ದೇಶದ ಅಭಿವೃದ್ಧಿಗೆ ತಾವು ಸಹ  ಮತದಾನದ ಮಾಡಿ ಎಂದು ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ನಂತರ ಶಾಸಕರ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ಎನ್ ಟಿ ತಮ್ಮಣ್ಣ ತಮ್ಮ ಕುಟುಂಬದೊಂದಿಗೆ ತೆರಳಿ ಮತದಾನ ಮಾಡಿದರು.