ಕೂಡ್ಲಿಗಿ ಶಾಸಕರ ಜನಪರ ಕಾಳಜಿ ಮೆಚ್ಚಿ ಬೆನ್ನುತಟ್ಟಿದ ಸಚಿವ ಜಮೀರ್.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 12  :- ಕೂಡ್ಲಿಗಿ ಕ್ಷೇತ್ರಕ್ಕೆ  ಮೊದಲ ಬಾರಿಗೆ ಶಾಸಕರಾಗಿದ್ದು  ಮೊದಲ ಅಧಿವೇಶನದಲ್ಲೇ ಕ್ಷೇತ್ರದಲ್ಲಿನ ಕುಡಿಯುವ ನೀರು, ರಸ್ತೆ, ಶಾಲಾಕಟ್ಟಡ, ಕೆರೆನೀರು ತುಂಬಿಸುವ ಯೋಜನೆ ಕುರಿತಂತೆ ಹಾಗೂ ಮಹಾತ್ಮ ಗಾಂಧೀಜಿ ಚಿತ್ತಾಭಸ್ಮ ಸೇರಿದಂತೆ ಕ್ಷೇತ್ರದ ಐತಿಹಾಸಿಕ ಸ್ಥಳಗಳ ಕುರಿತಾಗಿ ಅವುಗಳ ಅಭಿವೃದ್ಧಿ ಕುರಿತು  ಸದನದ ಗಮನ ಸೆಳೆದ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರ ಜನಪರ ಕಾಳಜಿ ಮೆಚ್ಚುವಂತಹುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಶಾಸಕರ ಬೆನ್ನುತಟ್ಟಿದರು.
ಕೂಡ್ಲಿಗಿ ಕ್ಷೇತ್ರಕ್ಕೆ ಸಚಿವರು ಭೇಟಿ ನೀಡುವ ಸಂದರ್ಭದಲ್ಲಿ ತಾಲೂಕಿನ ಶಿವಪುರ ಸಮೀಪ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಅದ್ದೂರಿಯಾಗಿ ಸ್ವಾಗತಿಸಿ ಗ್ರಾಮೀಣಭಾಗಗಳಿಗೆ ಸರಬರಾಜಗುವ ಶುದ್ಧ  ಕುಡಿಯುವ  ನೀರಿನ ಘಟಕವನ್ನು ವೀಕ್ಷಿಸಿ ಈ ಯೋಜನೆಯಲ್ಲಿ ಕೂಡ್ಲಿಗಿ ಪಟ್ಟಣ ಕೈ ಬಿಟ್ಟಿರುವುದರಿಂದ ಅದನ್ನು ಸೇರ್ಪಡೆ ಮಾಡುವ ಕುರಿತು ಸಂಬಂಧಿಸಿದವರಿಗೆ ತಿಳಿಸುತ್ತ ಕೂಡ್ಲಿಗಿ ಶಾಸಕರೊಂದಿಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸೇರ್ಪಡೆ ಮಾಡುವ ಭರವಸೆಯನ್ನು ಸಚಿವರು ತಿಳಿಸಿದರು.
ಕೂಡ್ಲಿಗಿ ಪಟ್ಟಣದಲ್ಲಿನ  ಹಳೇ ಆಸ್ಪತ್ರೆಯನ್ನು  ಹೆರಿಗೆ ಆಸ್ಪತ್ರೆ ಮಾಡುವ ಶಾಸಕರ ಮುಂದಾಲೋಚನೆಗೆ ಸಚಿವರು ಅಸ್ತು ಎಂದರಲ್ಲದೆ ಶಾಲಾಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಖಾಯಂ ಉಪನ್ಯಾಸಕರ ಸಮಸ್ಯೆ ಪರಿಹರಿಸುವ ಮನವಿಗೆ ಸಚಿವರು ಸ್ಪಂದನೆ ನೀಡಿದರು ಹಾಗೂ ಕೂಡ್ಲಿಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೂ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು ನಂತರ ಕೂಡ್ಲಿಗಿ ಶಾಸಕರ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಮೀರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮುಖಂಡರು ಹಾಗೂ ಕಾರ್ಯಕರ್ತರು ಇಂದಿನಿಂದಲೇ ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷದ ಬಲವರ್ಧನೆಗೆ ಮುಂದಾಗಿ ರಾಜ್ಯದ ಚುಕ್ಕಾಣಿ ಹಿಡಿದಂತೆ ಕೇಂದ್ರದ ಚುಕ್ಕಾಣಿ ಹಿಡಿಯಲು ಶ್ರಮಿಸುವಂತೆ ಕಿವಿಮಾತು ಹೇಳಿದರು ಅಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಶಾಸಕರ ಜೊತೆ ಸದಾ ಕೈ ಜೋಡಿಸುವೆ ಎಂದು ಸಚಿವ ಜಮೀರ್  ತಿಳಿಸಿದರು.
ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಮಾತನಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆವ ಸರ್ಕಾರವಾಗಿದ್ದು ಸರ್ಕಾರದ ಗ್ಯಾರಂಟಿಗಳು ನಮ್ಮ ಕ್ಷೇತ್ರದಲ್ಲಿ ಬಹುಪಯೋಗಿಗಳಾಗಿವೆ ಎಂದು ತಿಳಿಸಿದರು ಹಾಗೂ ಸಚಿವರು ನಮ್ಮ  ಕ್ಷೇತ್ರದ ಅಭಿವೃದ್ಧಿಗೆ  ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರ ಸಹೋದರ ತಮ್ಮಣ್ಣ ಎನ್ ಟಿ, ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಕ್ ಸೇರಿದಂತೆ ಅನೇಕ ಕಾಂಗ್ರೆಸ್ ಜನಪ್ರತಿನಿದಿನಗಳು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
l

One attachment • Scanned by Gmail