ಕೂಡ್ಲಿಗಿ ವೃತ್ತದ ಸೇವೆ ತೃಪ್ತಿ ತಂದಿದೆ – ವಸಂತ ವಿ ಅಸೋದೆ.


ಕೂಡ್ಲಿಗಿ. ಆ 4 :- ಕೂಡ್ಲಿಗಿ ಪೊಲೀಸ್ ವೃತ್ತ ನಿರೀಕ್ಷಿಕನಾಗಿ ಸಲ್ಲಿಸಿದ ಸೇವೆ ಈ ಭಾಗದ ಜನತೆಯ ಸಂಪೂರ್ಣ ಸಹಕಾರದಿಂದ ಬಹಳಷ್ಟು ತೃಪ್ತಿ ತಂದಿದೆ ಎಂದು ಕೂಡ್ಲಿಗಿ ಪೊಲೀಸ್ ವೃತ್ತ ನಿರೀಕ್ಷಕ ಸೇವೆಯಿಂದ ಮೊಳಕಾಲ್ಮುರು ವೃತ್ತಕ್ಕೆ ವರ್ಗಾವಣೆಗೊಂಡಿರುವ ವಸಂತ ವಿ ಅಸೋದೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಕೂಡ್ಲಿಗಿ ಪೊಲೀಸ್ ಠಾಣಾವತಿಯಿಂದ ಆಯೋಜಿಸಲಾಗಿದ್ದ  ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ  ಮಾತನಾಡುತ್ತ  ನನ್ನ ವೃತ್ತಿ ಜೀವನದಲ್ಲಿ ಕೂಡ್ಲಿಗಿ ವೃತ್ತದ ಸೇವೆ ಬಹಳಷ್ಟು ಆತ್ಮತೃಪ್ತಿ ತಂದಿದೆ  ಇಲ್ಲಿನ ಜನತೆ ಪೊಲೀಸ್ ಇಲಾಖೆಯೊಂದಿಗಿನ ಸಹಕಾರ ಹಾಗೂ ಅಪರಾಧ ತಡೆಯಲ್ಲೂ ಜನತೆಯು ಸಹಕಾರ ನೀಡುತ್ತಿದ್ದು ಇದರಿಂದಾಗಿ ವೃತದ ವೃತ್ತಿ ಜೀವನ ಖುಷಿ ತಂದಿದೆ ಅಲ್ಲದೆ ವೃತ್ತಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ಹಾಗೂ ಗುಡೇಕೋಟೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಸಹ ವೃತ್ತಿಯಲ್ಲಿ ಶಿಸ್ತು ಹಾಗೂ ಜನಸ್ನೇಹಿ ಪೊಲೀಸ್ ಸೇವೆ ಮಾಡುತ್ತಿದ್ದಾರೆ ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪೊಲೀಸ್ ಸಿಬ್ಬಂದಿಗಳ ಸೇವೆಯನ್ನು ಸಹ ಪ್ರಶಂಸಿದರು.
ಕೂಡ್ಲಿಗಿ ಪಿಎಸ್ಐ ಧನುಂಜಯ ಮಾತನಾಡಿ ಕೂಡ್ಲಿಗಿ ಸಿಪಿಐಯಾಗಿದ್ದ ವಸಂತ ವಿ ಅಸೋದೆ ಅವರು ನನಗೆ ಪಿಎಸ್ಐ ಪ್ರೊಬೆಷನರಿ ಸಂದರ್ಭದಲ್ಲಿ ಗುರುವಿನ ಸ್ಥಾನದಲ್ಲಿ ನಿಂತು  ವೃತ್ತಿ ಜೀವನದ ಮಾರ್ಗದರ್ಶನ ಮಾಡುವ ಮಾರ್ಗದರ್ಶಕರಾಗಿದ್ದರೂ ಅಲ್ಲದೆ ಕೂಡ್ಲಿಗಿ ಪೊಲೀಸ್ ಠಾಣೆಗೆ ನನ್ನ ವೃತ್ತಿ ಸೇವೆ ಆರಂಭಿಸಲು ಕಾರಣಕರ್ತರಲ್ಲಿ ಇವರು ಒಬ್ಬರಾಗಿದ್ದರು ಇವರು ನನಗೆ ಮೇಲಾಧಿಕಾರಿ ಜೊತೆಗೆ ನನ್ನ ಗುರುಗಳೆಂದರೆ ತಪ್ಪಾಗದು ಎಂದರು.
ಕೂಡ್ಲಿಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿಜಯಕುಮಾರ, ರೇವು ದೇವರಮನಿ, ಬಸವರಾಜ, ಮಂಜುನಾಥ ಸೇರಿದಂತೆ ಇತರರು ಸಿಪಿಐ ವಸಂತ ವಿ ಅಸೋದೆ ಅವರ ಸೇವೆ ಶಿಸ್ತು ಸಂಯಮವನ್ನು ಕೊಂಡಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ವಿಜಯಕುಮಾರ ಸ್ವಾಗತಿಸಿ, ನಿರೂಪಿಸಿದರು. ರೇವಣ್ಣ ಉಜ್ಜಿನಿ ವಂದನಾರ್ಪಣೆ ಸಲ್ಲಿಸಿದರು.