ಕೂಡ್ಲಿಗಿ : ವಿಷ್ಣು ಹುಟ್ಟುಹಬ್ಬ – ಸರಳ ಆಚರಣೆ.

ಕೂಡ್ಲಿಗಿ.ಸೆ. 18 :- ಇಂದು ಚಲನಚಿತ್ರ ಮೇರುನಟ  ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬವಾಗಿದ್ದು ಪಟ್ಟಣದ ವಿಷ್ಣುವರ್ಧನ್ ಪಕ್ಕಾ ಅಭಿಮಾನಿಗಳಲ್ಲಿ ಒಬ್ಬರಾದ ಸುಧಾಕರ ಎಂಬುವ ಸವಿತಾ ಸಮಾಜದ ಅಧ್ಯಕ್ಷ ಇಂದು ತಮ್ಮ ಸೆಲ್ಯೂನ್ ಅಂಗಡಿಯಲ್ಲಿ ಕೋವಿಡ್ ಇರುವ ಕಾರಣ ಸರಳವಾಗಿ ಆಚರಿಸಿದ್ದಾರೆ.   ಸುಧಾಕರ ಹಾಲಿ  ಸವಿತಾ ಸಮಾಜದ ಅಧ್ಯಕ್ಷರಾಗಿದ್ದು ಪ್ರತಿದಿನವೂ ದೇವರ ಫೋಟೋಗಳಿಗೆ ಪೂಜೆ ಸಲ್ಲಿಸುವಂತೆ ವಿಷ್ಣು ಭಾವಚಿತ್ರಕ್ಕೂ ಪೂಜೆಸಲ್ಲಿಸುವ ಮೂಲಕ ಅಭಿಮಾನ ಮೆರೆಯುತ್ತಿದ್ದು ವಿಷ್ಣುವರ್ಧನ್ ಅಭಿಮಾನಿ ಬಳಗದ ಯಾವುದೇ ಕಾರ್ಯಕ್ರಮ ರಾಜ್ಯದೆಲ್ಲೆಡೆ ಇದ್ದರು ಈ ಯುವಕ ಸುಧಾಕರ್ ಅಲ್ಲಿ ಹಾಜರ್ ರಾಜ್ಯ ವಿಷ್ಣು ಅಭಿಮಾನಿಬಳಗದಲ್ಲಿ ಗುರುತಿಸಿಕೊಂಡಿರುವ ಪಕ್ಕಾ ಅಭಿಮಾನಿಯಾಗಿದ್ದು ಕೋವಿಡ್ ನಿಯಮ ಪಾಲಿಸಿಕೊಂಡು ಇಂದು ಎಲ್ಲಿಯೂ ಹೊರಗಡೆ ಮೆರವಣಿಗೆ ಇತರೆ ಕಾರ್ಯಕ್ರಮ ನಡೆಸದೆ ತಮ್ಮಕಾಯಕ ಮಾಡುವ ಸೆಲ್ಯೂನ್ ಅಂಗಡಿಯಲ್ಲೇ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.