ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ “ಕಾಳಾಪುರ” ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿ

ಕೊಟ್ಟೂರು ಮಾ 27 : ತಾಲೂಕಿನ ಕಾಳಾಪುರ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಮನಗಂಡು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕಎನ್ ವೈ ಗೋಪಾಲಕೃಷ್ಣ ಅವರ ಸೂಚನೆ ಮೇರೆಗೆ ಗ್ರಾಮ ಪಂಚಾಯತಿಗೆ ಭೇಟಿನೀಡಿದ ತಹಶಿಲ್ದಾರರು, ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಅಭಿಯಂತರರು ಗ್ರಾಮ.ಪಂ.ಅಧಿಕಾರಿ, ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಲಾಯಿತು.
ಸಭೆಯಲ್ಲಿ ನಡೆದ ಪ್ರಮುಖ ಅಂಶಗಳು..
5 ಬೋರ್ ವೆಲ್ ಗಳನ್ನು ಸುಮಾರು 800ಕ್ಕೂ ಹೆಚ್ಚು ಅಡಿ ಕೊರಸಲಾಯಿತು ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ದೊರಕಿಲ್ಲ ಮೂರು ಬಂದ ಆಗಿವೆ 2 ಸಹ ನೀರಿನ ಮಟ್ಟ ಕಡಿಮೆಯಾಗಿದೆ
ಸ್ಥಳೀಯ ಎರಡು ಖಾಸಗಿ ಬೊರವೆಲ್ ಗುರುತಿಸಲಾಯಿತು. ಮಾನ್ಯ ಶಾಸಕರು ರೈತರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ನಿಮ್ಮ ಗ್ರಾಮಕ್ಕೆ ನೀರಿನ ಅಗತ್ಯತೆ ತುಂಬಾ ಇದೆ ಆದ್ದರಿಂದ ನೀವು ಸಹಕರಿಸಬೇಕೆಂದು ತಿಳಿಸಿದರು ಮನವಿಗೆ ಸ್ಪಂದಿಸಿ ನೀರು ಪೂರೈಸಲು ಒಪ್ಪಿಗೆ ಸಹ ಸೂಚಿಸಿದರು.