ಕೂಡ್ಲಿಗಿ ವಿಧಾನಸಭಾ ಕ್ಷೇತ್ರ -79.69%ಮತದಾನ. ಮತಗಟ್ಟೆ 86-ಅತಿಹೆಚ್ಚು, ಮತಗಟ್ಟೆ35-ಅತೀಕಡಿಮೆ ಮತದಾನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ. 11 :- ವಿಧಾನಸಭಾ ಚುನಾವಣೆಯ ಮತದಾನ ಬುಧವಾರ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನ ಪ್ರಕ್ರಿಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 79.69ರಷ್ಟು ಮತದಾನವಾಗಿದ್ದು ಅದರಲ್ಲಿ ನರಸಿಂಹಗಿರಿ ಮತಗಟ್ಟೆ ಸಂಖ್ಯೆ 86ರಲ್ಲಿ ಶೇ95.56ರಷ್ಟು  ಅತೀಹೆಚ್ಚು ಮತದಾನವಾಗಿದ್ದು ಕೂಡ್ಲಿಗಿ ಪಟ್ಟಣದ ಜ್ಯೂನಿಯರ ಕಾಲೇಜ್ ಆವರಣದ ಎರಡನೇ ಕೊಠಡಿಯ ಮತಗಟ್ಟೆ ಸಂಖ್ಯೆ 35ರಲ್ಲಿ ಶೇ. 54.74ರಷ್ಟು ಮತದಾನವಾಗಿದ್ದು ಅತೀ ಕಡಿಮೆ ಮತದಾನವಾಗಿರುವ ಮತಗಟ್ಟೆಯಾಗಿದೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು -1, 03, 387, ಮಹಿಳೆಯರು -1, 00, 352 ಹಾಗೂ ಇತರೆ 14ಸೇರಿ ಒಟ್ಟು 2, 03, 753 ಮತದಾರರಿದ್ದು ನಿನ್ನೆ ನಡೆದ  ವಿಧಾನಸಭಾ ಚುನಾವಣೆಯ ಮತದಾನ ದಿನದಂದು ನಡೆದಂತೆ 83, 997ಪುರುಷರು, 78, 384ಮಹಿಳೆಯರು ಹಾಗೂ ಇತರೆ ಇಬ್ಬರು ಮತದಾನ ಮಾಡಿದಂತೆ 1,62, 373ಮತದಾರರು ತಮ್ಮ ಹಕ್ಕು ಚಲಾಯಿಸಿದಂತೆ ಕೂಡ್ಲಿಗಿ ಕ್ಷೇತ್ರದಲ್ಲಿ ಶೇ 79.69ರಷ್ಟು ಮತದಾನವಾಗಿದ್ದು ವಿಜಯನಗರ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಬಹುದಾಗಿದೆ.
ಕೂಡ್ಲಿಗಿ ಕ್ಷೇತ್ರದಲ್ಲಿ 245 ಮತಗಟ್ಟೆಗಳಿದ್ದು ಅದರಲ್ಲಿ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಿನಿಧಿಸಿರುವ ಡಾ.ಎನ್ ಟಿ  ಶ್ರೀನಿವಾಸ ಅವರು ಮತಚಲಾಯಿಸಿದ  ನರಸಿಂಹಗಿರಿ ಗ್ರಾಮದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ86ರಲ್ಲಿ 310ಪುರುಷರು, 298ಮಹಿಳೆಯರು ಸೇರಿ ಒಟ್ಟು 608ಮತದಾರರಿದ್ದು ಇದರಲ್ಲಿ ನಿನ್ನೆ ನಡೆದ ಮತದಾನದಲ್ಲಿ 297ಪುರುಷರು, 284ಮಹಿಳೆಯರು ಸೇರಿ  ಒಟ್ಟು 581ಮತದಾರರು ಮತಚಲಾಯಿಸಿದ್ದು ಶೇ. 95.56ರಷ್ಟಾಗಿ ಅತೀಹೆಚ್ಚು ಮತದಾನ ನಡೆದ ಮತಕೇಂದ್ರವಾಗಿದೆ. ಅದೇ ರೀತಿಯಾಗಿ ಕೂಡ್ಲಿಗಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ಒಂದೆಡೆ ಇರುವ  ನಾಲ್ಕು ಮತಗಟ್ಟೆಗಳಲ್ಲಿ ಎರಡನೇ ಕೊಠಡಿಯ ಮತಗಟ್ಟೆ ಸಂಖ್ಯೆ 35ರಲ್ಲಿ 330ಪುರುಷರು ಹಾಗೂ 355ಮಹಿಳೆಯರು ಸೇರಿ ಒಟ್ಟು 685ಮತದಾರರಿದ್ದು ಇದರಲ್ಲಿ ನಿನ್ನೆ ನಡೆದ ಮತದಾನದಲ್ಲಿ 186ಪುರುಷರು, 189ಮಹಿಳೆಯರು ಸೇರಿ ಒಟ್ಟು 375ಮತದಾರರು ಮತಚಲಾಯಿಸಿದ್ದು ಶೇ.54.74ರಷ್ಟಾಗಿ ಕ್ಷೇತ್ರದಲ್ಲೇ ಅತೀ ಕಡಿಮೆ ಮತದಾನವಾಗಿರುವ ಮತಗಟ್ಟೆಯಾಗಿದೆ ಎಂದು ಹೇಳಬಹುದಾಗಿದೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲರ ಸಹಕಾರದಿಂದ ಶಾಂತಿಯುತ ಮತದಾನವಾಗಿದ್ದು ಅಲ್ಲದೆ ನೂತನ ವಿಜಯನಗರ ಜಿಲ್ಲೆಯಲ್ಲಿ ಇದು ಮೊದಲ ಚುನಾವಣೆಯಾಗಿದೆ ಜಿಲ್ಲಾವಾರು ಸೇರಿದಂತೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮತದಾನ ಶೇ 79.69 ರಷ್ಟಾಗಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದ್ದು ಶಾಂತಿಯುತವಾಗಿ ನಡೆದ ಮತದಾನ ಪ್ರಕ್ರಿಯೆಗೆ ಕ್ಷೇತ್ರದ ಚುನಾವಣೆಗೆ ಸಂಬಂದಿಸಿದ  ಅಧಿಕಾರಿಗಳು, ಕ್ಷೇತ್ರದ ಹುರಿಯಾಳುಗಳು ಹಾಗೂ ಪೊಲೀಸ್ ಅಧಿಕಾರಿಗಳು ಜನತೆಯನ್ನು ಅಭಿನಂದಿಸಿದ್ದಾರೆ.