ಕೂಡ್ಲಿಗಿ ಲೋಕೇಶ್ ವಿ ನಾಯಕ ಕೈ ತೊರೆದು ಬಿಜೆಪಿಗೆ ಸೇರ್ಪಡೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.5 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿ ಕಾಂಗ್ರೇಸ್ ಟಿಕೆಟ್ ನಿಂದ ವಂಚಿತರಾದ ಕೂಡ್ಲಿಗಿಯ ಕಾಂಗ್ರೇಸ್ ಕೆಪಿಸಿಸಿ ಸದಸ್ಯರಾಗಿದ್ದ ಲೋಕೇಶ್ ವಿ ನಾಯಕ ಕೈ ಪಕ್ಷ ಬಿಟ್ಟು ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೇಸ್ ನ ಲೋಕೇಶ ವಿ ನಾಯಕ ಕಾನೂನು ಪದವೀಧರರಾಗಿ ಬೆಂಗಳೂರಿನಲ್ಲಿ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿದ್ದ ಅವರು ನಂತರ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ 2016ರಲ್ಲಿ ಬಂದು ಎರಡು ವರ್ಷದ ನಂತರ 2018ರ ಚುನಾವಣೆಯಲ್ಲಿ ಕಾಂಗ್ರೇಸ್ ಟಿಕೆಟ್ ಬಯಸಿದ್ದರು ಕೊನೆ ಗಳಿಗೆಯಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ ಗುಜ್ಜಲ್ ರಘು ಗೆ ದೊರೆತ ಹಿನ್ನೆಲೆಯಲ್ಲಿ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 25ಸಾವಿರಕ್ಕೂ ಅಧಿಕ ಮತ ಪಡೆದು ತಾವು ಪರಾಜಿತಗೊಂಡರು ಮೂರನೇ ಸ್ಥಾನಕ್ಕೆ ಬಂದು ತನ್ನ ಕ್ಷೇತ್ರದ ಪ್ರಾಬಲ್ಯ ತೋರಿಸಿದ್ದರು ಅಲ್ಲದೆ ಜೆಡಿಎಸ್ ನ ಪ್ರಬಲ ಸ್ಪರ್ದಿ ಎನ್ ಟಿ ಬೊಮ್ಮಣ್ಣ ಹಾಗೂ ರಘು ಗುಜ್ಜಲ್ ಸೋಲಿಗೂ ಕಾರಣರಾಗಿದ್ದರು ಆದರೆ ಕಾಂಗ್ರೇಸ್ ಬಿಡದೆ ಮತ್ತೊಮ್ಮೆ ಸೇರಿ ಐದು ವರ್ಷದ ಕಾಂಗ್ರೇಸ್ ನಲ್ಲಿ ಕೆಪಿಸಿಸಿ ಸದಸ್ಯರಾಗಿ ಕ್ಷೇತ್ರದಲ್ಲಿ ಸುತ್ತಾಡಿ ಕಾಂಗ್ರೇಸ್ ಬಲ ಪಡಿಸಿದರು ಆದರೆ ಕಾಂಗ್ರೇಸ್ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಡಾ ಶ್ರೀನಿವಾಸ ಹೆಸರು ಕೇಳಿಬರುತ್ತಿರುವ ಬಗ್ಗೆ ತಿಳಿದು ಮತ್ತೊಮ್ಮೆ ಟಿಕೆಟ್ ವಂಚಿತರಾಗಿರುವ ಲೋಕೇಶ ನಾಯಕ ಕಾಂಗ್ರೇಸ್ ನ ಹೈಕಮಾಂಡ್ ನ ನಡೆಯಿಂದ ಮನನೊಂದು ಇಂದು ಅಧಿಕೃತವಾಗಿ ಶ್ರೀರಾಮುಲು ನೇತೃತ್ವದಲ್ಲಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಬಾವುಟ ಹಿಡಿದರು.
ಈ ಸಂದರ್ಭದಲ್ಲಿ ಬಿಜೆಪಿಯ ನೆ. ಲ. ನರೇಂದ್ರಬಾಬು ಸೇರಿದಂತೆ ಪ್ರಮುಖ ನಾಯಕರು. ಲೋಕೇಶ್ ನಾಯಕ ಅವರ ಬೆಂಬಲಿಗರು ಹಾಗೂ ಇತರರಿದ್ದರು