ಕೂಡ್ಲಿಗಿ : ಲಾರಿ ಡಿಕ್ಕಿ – ಬೈಕಿನಲ್ಲಿದ್ದ ಓರ್ವ ಮಹಿಳೆ ಸಾವು, ಮೂವರಿಗೆ ಗಾಯ

ಕೂಡ್ಲಿಗಿ, ಜು. 25 :- ತಾಲೂಕಿನ ಅಮಲಾಪುರದ ಸಂಬಂಧಿಕರ ಮನೆಯಲ್ಲಿದ್ದ ತೊಟ್ಟಿಲು ಕಾರ್ಯ ಮುಗಿಸಿಕೊಂಡು ತಮ್ಮ ಸ್ವಗ್ರಾಮಕ್ಕೆ ಹೋಗುತ್ತಿರುವಾಗ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಮಕ್ಕಳು ಸೇರಿದಂತೆ ಬೈಕ್ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ವಿರುಪಾಪುರ ಸಮೀಪದ ಮದ್ರಸಾ ಬಳಿಯ ಹೈವೇ50 ರಲ್ಲಿ ಇಂದು ಜರುಗಿದೆ.

ಹುಚ್ಚೇವ್ವನಹಳ್ಳಿಯ ನೇತ್ರಾವತಿ (32) ಸ್ಥಳದಲ್ಲೇ ಮೃತಪಟ್ಟಿರುವ ಮಹಿಳೆ. ಈಕೆಯ ಪತಿ ಬೈಕ್ ಸವಾರ ತಿಪ್ಪೇಸ್ವಾಮಿ (38)ಮಗಳು ತ್ರಿಪೂರ್ಣ(12) ಹಾಗೂ ತಿಪ್ಪೇಸ್ವಾಮಿ ತಮ್ಮನ ಮಗ ಪ್ರಜ್ವಲ್ (4) ಗಾಯಗೊಂಡವರಾಗಿದ್ದು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ.

ಬೈಕಿಗೆ ಲಾರಿ ಡಿಕ್ಕಿ ಹೊಡೆದು ನಿಲ್ಲಿಸದೆ ಹಾಗೇ ಹೋಗಿದ್ದು ಬೆನ್ನತ್ತಿದ ಕೂಡ್ಲಿಗು ಪೊಲೀಸರಿಗೆ ಲಾರಿ ಸಿಕ್ಕಿದೆ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.