ಕೂಡ್ಲಿಗಿ : ಯುವಕ ಆತ್ಮಹತ್ಯೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.26 :- ಪಟ್ಟಣದ ಉಡಸಲಮ್ಮಕಟ್ಟೆ ಸಮೀಪದ ಮನೆ ಹತ್ತಿರದಲ್ಲಿದ್ದ ಮರಕ್ಕೆ ನೇಣುಹಾಕಿಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಕಳೆದ ರಾತ್ರಿ 8ಗಂಟೆಯಿಂದ ಇಂದು ಬೆಳಿಗ್ಗೆ 6 ಗಂಟೆ ಮಧ್ಯವಧಿಯಲ್ಲಿ ಜರುಗಿದೆ.
ಪಟ್ಟಣದ ಎರಡನೇ ವಾರ್ಡ್ ನ ಜುಗಲರ್ ಅಭಿಷೇಕ್ ಅಲಿಯಾಸ್ ಅಭಿ (20) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ಯುವಕನಾಗಿದ್ದಾನೆ. ಈತನು ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯ ಹತ್ತಿರದ ಕಾಳಾಚಾರಿ ಮನೆ ಪಕ್ಕದ ಬತ್ತಿ ಮರಕ್ಕೆ ಹಗ್ಗದಿಂದ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.