ಕೂಡ್ಲಿಗಿ : ಮೈನ್ಸ್ ಲಾರಿಗಳ ಹಾವಳಿ – ದೂಳಿನಿಂದ ಕಾಯಿಲೆ ಬಳುವಳಿ.

ಕೂಡ್ಲಿಗಿ.ನ. 24 :- ಕೆಲವೇ ಜನ ತಾವು ಶ್ರೀಮಂತರಾಗಲು ಅನೇಕ ಜನರನ್ನು ಕಾಯಿಲೆಕೂಪಕ್ಕೆ ತಳ್ಳುವಂತಹದು ಸರಿಯಲ್ಲ ಇದಕ್ಕೆ ನಿದರ್ಶನವೆಂಬಂತೆ ಕೂಡ್ಲಿಗಿ ಪಟ್ಟಣದ ಮೂಲಕ ಅನೇಕ ಮೈನ್ಸ್ ಲಾರಿಗಳ ಓಡಾಟದ  ಹಾವಳಿಯಿಂದ   ರಸ್ತೆಬದಿ ಓಡಾಡುವ ಜನರಿಗೆ ಹಾಗೂ ರಸ್ತೆಬದಿಯ ಬೀದಿ ಅಂಗಡಿಗಳ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ರಸ್ತೆಯಿಂದ ಏಳುವ ದೂಳು ಅಸ್ತಮಾದಂತಹ ಅನೇಕ ಕಾಯಿಲೆ ಬಳುವಳಿಯಾಗಿ ಸಿಗಲಿದೆ ಎಂಬುದು ಮಾತ್ರ ಸತ್ಯ.      ನೈಸರ್ಗಿಕವಾಗಿ ಸಿಗುವ ಕಬ್ಬಿಣದ ಅದಿರಿನ  ಖನಿಜವನ್ನು ಸಂಡೂರಿನಿಂದ ಭಾರಿವಾಹನ  ಲಾರಿಗಳ ಮೂಲಕ ಬೇರೆಡೆ ಸಾಗಿಸುವಲ್ಲಿ ಕೆಲವೇ ಕೆಲವು ಶ್ರೀಮಂತರು  ಲಾರಿಗಳಲ್ಲಿ ತುಂಬಿದ  ಅದಿರಿನ ಮೇಲೆ ಸಂಪೂರ್ಣ ತಾಡಪಲ್ಲು ಹಾಕದೆ ಮತ್ತು ಯಾವುದೇ ಸಂಬಂಧಿಸಿದ ಇಲಾಖೆಗಳ ನೀತಿ ನಿಯಮ ಪಾಲಿಸದೇ ಎಗ್ಗಿಲ್ಲದೆ ಒಂದರ ಹಿಂದೆ ಒಂದರಂತೆ ಸಾಲುಗಟ್ಟಿ ಓಡಾಡುವ ಲಾರಿಗಳು  ಕೂಡ್ಲಿಗಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಹಾದುಹೋಗುತ್ತಿದ್ದು ಯಾರೋ ಕೆಲವರು ಶ್ರೀಮಂತರಾಗುವುದಕ್ಕೆ ಏನೂ ಅರಿಯದ ಕೂಡ್ಲಿಗಿ ಪಟ್ಟಣದ ಜನತೆ ಅದಿರು ತುಂಬಿದ ಲಾರಿಗಳ ಎಗ್ಗಿಲ್ಲದ ಓಡಾಟದಿಂದ ಏಳುವ ರಸ್ತೆಯ ದೂಳು ರಸ್ತೆಬದಿಯ ಜನರ ಮೈಮೇಲೆ ಪೌಡರ್ ನಂತೆ ಲೇಪನವಾಗುತ್ತಿದ್ದು ಅಲ್ಲದೆ ರಸ್ತೆಬದಿಯಲ್ಲಿ ವ್ಯಾಪಾರ ಮಾಡುವ ಅನೇಕ ಬೀದಿಬದಿಯ ಅಂಗಡಿ ಒಳಹೊಕ್ಕ ದೂಳು ಅಲ್ಲಿನ ಆಹಾರಗಳ ಮೇಲೆ ಕುಳಿತುಕೊಂಡು ಅದನ್ನೇ ಸೇವಿಸುವ ಅನೇಕ ಬಡಜನತೆಯ ದೇಹದೊಳಗೆ ಸೇರಿ ಅಸ್ತಮಾದಂತಹ ಅನೇಕ ಕಾಯಿಲೆ ಏನೂ ಅರಿಯದ ಜನತೆ ಬಳುವಳಿಯಾಗಿ ಪಡೆದು ಕಾಯಿಲೆಯಿಂದಲೇ ತನ್ನ ಕೊನೆಯುಸಿರು ಬಿಡುವ ಅನಾರೋಗ್ಯ ಜೀವನದ ಚೆಲ್ಲಾಟಕ್ಕೆ ನಾಂದಿಹಾಡುವ ಅದಿರು ಲಾರಿಗಳು ಪಟ್ಟಣದ ಉತ್ತಮ ರಸ್ತೆಗಳು ಸಹ ಈ ಭಾರಿ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿವೆ ಇವುಗಳೆಲ್ಲ ನಿಯಂತ್ರಣಕ್ಕೆ ಕೂಡ್ಲಿಗಿ  ಪಟ್ಟಣದ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಈ ಮೈನ್ಸ್ ಲಾರಿಗಳ ಸಂಚಾರಕ್ಕೆ ಬ್ರೇಕ್ ಹಾಕಿ ಪಟ್ಟಣದ ನೂರಾರು ಏನೂ ಅರಿಯದ ಜನತೆಯ ಆರೋಗ್ಯ ಕಾಪಾಡುವಲ್ಲಿ ಮುಂದಾಗಬೇಕೆಂದು ಪಟ್ಟಣದ ನಾಗರೀಕ ಹಿತರಕ್ಷಣಾ ವೇದಿಕೆ ಸೇರಿದಂತೆ ಪಟ್ಟಣದ ಅನೇಕ ಸಂಘಟನೆಗಳು ಮತ್ತು ಪ್ರಜ್ಞಾವಂತರ ಮನವಿಯಾಗಿದೆ.