ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸ್ಥಾನಕ್ಕೆ ಗುರುಸಿದ್ದನಗೌಡ ರಾಜೀನಾಮೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 16 :- ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಎಂ ಗುರುಸಿದ್ದನಗೌಡ ಅವರು ರಾಜ್ಯದ  ವರಿಷ್ಠರ ನಡೆಯಿಂದ ಅಸಮಾಧಾನ ವ್ಯಕ್ತಪಡಿಸಿದ ಅವರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ವೈಯಕ್ತಿಕ  ರಾಜೀನಾಮೆಯನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ಶನಿವಾರ ಸಲ್ಲಿಸಿದ್ದಾರೆ.
ಇತ್ತೀಚಿನ ನಡೆದ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆಯಿಂದ ವರಿಷ್ಠರ ನಡೆಗೆ ರಾಜಕೀಯ ವಿದ್ಯಮಾನದಿಂದ  ಅಸಮಾಧಾನಗೊಂಡಿರುವ ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರನ್ನು ಪಕ್ಷದ ವರಿಷ್ಠರು ಯಾವುದೇ ಕಾರಣಕ್ಕೆ ಸಮಾಧಾನ ಪಡಿಸಲು ಮುಂದಾಗದೆ ಇರುವುದಕ್ಕೆ ನಿನ್ನೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ವೈಯಕ್ತಿಕ ಕಾರಣದಿಂದ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಲ್ಲಿಸಿರುವುದಾಗಿ ಎಂ ಗುರುಸಿದ್ದನಗೌಡ ತಿಳಿಸಿದರು ಹಾಗೂ ಮುಂದಿನ ನಡೆಯ ನಿರ್ಧಾರವನ್ನು ಒಂದೆರಡು ದಿನದಲ್ಲಿ ತಿಳಿಸುವುದಾಗಿ ಸಂಜೆವಾಣಿ ಪ್ರತಿನಿಧಿಗೆ ತಿಳಿಸಿದರು.