ಕೂಡ್ಲಿಗಿ: ಬೀದಿನಾಯಿಗಳು ಕಚ್ಚಿ-ಬಾಲಕನಿಗೆ ಗಾಯ.

ಕೂಡ್ಲಿಗಿ. ಡಿ. 8 :- ಪಟ್ಟಣದ  ಕೂಲಿಕಾರ್ಮಿಕನೊಬ್ಬನ 5ವರ್ಷದ ಮಗನಿಗೆ ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿರುವ ಘಟನೆ ಕಳೆದೆರಡು ದಿನದ ಹಿಂದೆ ಹಳೇ ಸಂತೆಮಾರುಕಟ್ಟೆ ಮೈದಾನದಲ್ಲಿ ಜರುಗಿದೆ.   ಬಾರಿಕರ ಮಂಜುನಾಥ ಎಂಬುವ ಕೂಲಿಕಾರ್ಮಿಕನ ಮಗನಾದ ಐದು ವರ್ಷದ ಮಣಿಕಂಠ ಎಂಬಾತನೇ ಬೀದಿನಾಯಿಗಳ ಕಚ್ಚಾಟದಿಂದ ಗಾಯಗೊಂಡ ಬಾಲಕನಾಗಿದ್ದನೆಂದು ತಿಳಿದಿದೆ. ಮಣಿಕಂಠನು ಭಾನುವಾರದಂದು  ಹಳೇ ಸಂತೆಮೈದಾನದ ಆವರಣದಲ್ಲಿ ಆಟವಾಡುತ್ತ ಅಲ್ಲೇ ಸಮೀಪ ಮೂತ್ರವಿಸರ್ಜನೆಗೆ ಹೋಗಿದ್ದಾಗ ಚಿಕನ್ ಅಂಗಡಿಗಳ ಮುಂದೆ ಗುಂಪು ಗುಂಪಾಗಿರುವ ಬೀದಿನಾಯಿಗಳ ದಂಡೊಂದು ಮಣಿಕಂಠನ ಮೇಲೆ ದಾಳಿ ನಡೆಸಿ ಬಲಭುಜದ ಸಮೀಪ ಕಚ್ಚಿಗಾಯಗೊಳಿಸಿದ್ದು ಸಮೀಪದಲ್ಲಿದ್ದ ಜನರು ಬಾಲಕನ ಕಿರುಚಾಟ ಕೇಳಿ ಬೀದಿನಾಯಿಗಳನ್ನು ಓಡಿಸಿ ಬಾಲಕನ ಪ್ರಾಣ ಉಳಿಸಿದ್ದಾರೆಂದು ಹೇಳಬಹುದಾಗಿದೆ. ಮಗುವಿನ ಮೇಲರಗಿ ಗಾಯಗೊಳಿಸಿದ ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ಪಟ್ಟಣಪಂಚಾಯತಿ ಅಧಿಕಾರಿ, ಸಿಬ್ಬಂದಿ ಮುಂದಾಗಿ ಇನ್ನು ಅನೇಕ ಮಕ್ಕಳ ಜೀವವನ್ನು ಉಳಿಸುವಂತೆ ಅನೇಕ ಜನಪರ ಸಂಘಟನೆಗಳು ಹಾಗೂ ಗಾಯಗೊಂಡ ಬಾಲಕನ ತಂದೆ ಮಂಜುನಾಥ ಪಟ್ಟಣಪಂಚಾಯತಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.