ಕೂಡ್ಲಿಗಿ : ಬಿ.ನರಸಿಂಹಪ್ಪ,ನಿಧನ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 20 :- ಪಟ್ಟಣಪಂಚಾಯತಿ  ನಿವೃತ್ತ ನೌಕರ ಬಿ.ನರಸಿಂಹಪ್ಪ (63) ನಿವೃತ್ತಿ ನಂತರದ 6ತಿಂಗಳಿನಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ಇವರು ಭಾನುವಾರ ಸಂಜೆ 7ಗಂಟೆಗೆ ಪಟ್ಟಣದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೂಡ್ಲಿಗಿ ಪಟ್ಟಣ ಪಂಚಾಯತಿಯಲ್ಲಿ ನೀರಗಂಟಿಯಾಗಿ ಕರ್ತವ್ಯ ನಿರ್ವಹಿಸಿ ತಮ್ಮ ವಯೋ ನಿವೃತ್ತಿ ಹೊಂದಿದ ನಂತರ 6ತಿಂಗಳ ಬಳಿಕ ಅವರಿಗೆ ಪಾರ್ಶ್ವವಾಯು ಕಾಯಿಲೆಯಿಂದ  ಬಳಲುತ್ತ ಭಾನುವಾರ ಅವರು ಪತ್ನಿ,ಮಕ್ಕಳನ್ನು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆಯನ್ನು ಪಟ್ಟಣದ ಶಾಂತಿಧಾಮದಲ್ಲಿ ಇಂದು ಮಧ್ಯಾಹ್ನ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ ಇವರ ನಿಧನಕ್ಕೆ ನಿವೃತ್ತ ನೌಕರರ ಸಂಘ, ಪಟ್ಟಣ ಪಂಚಾಯತಿ ನೌಕರರು ಇತರರು ಸಂತಾಪ ಸೂಚಿಸಿದ್ದಾರೆ.