ಕೂಡ್ಲಿಗಿ ಬಿಜೆಪಿ ಯುವಮೋರ್ಚಾದಿಂದ ರಕ್ತದಾನ ಶಿಬಿರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.17 :- ದೇಶದ ಪ್ರಧಾನಿ ನರೇಂದ್ರಮೋದಿ ಅವರ 72ನೇ ಹುಟ್ಟುಹಬ್ಬದ ದಿನವಾದ ಇಂದು ಬಿಜೆಪಿಯ ಕೂಡ್ಲಿಗಿ ಯುವ ಮೋರ್ಚಾ ಪಧಾಧಿಕಾರಿಗಳು ಹಾಗೂ ಇತರರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.
ಪಟ್ಟಣದಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ಯುವಮೋರ್ಚಾ, ಹೊಸಪೇಟೆ ಚಿರಂಜೀವಿ ಬ್ಲಡ್ ಬ್ಯಾಂಕ್ ಹಾಗೂ ಕೂಡ್ಲಿಗಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ರಕ್ತದಾನ ಶಿಬಿರವನ್ನು ಕೂಡ್ಲಿಗಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಶಾರದಾಬಾಯಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡುತ್ತ ಎಲ್ಲಾ ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನವಾಗಿದೆ ಯುವಕರು ಹೆಚ್ಚು ಹೆಚ್ಚು ರಕ್ತದಾನ ಮಾಡುತ್ತಿದ್ದು ಅನೇಕ ರೋಗಿಗಳ, ಗಾಯಾಳುಗಳ ಪಾಲಿಗೆ ದೇವರಂತೆ ಕಾಣುತ್ತಾರೆ ಅಲ್ಲದೆ ಅಂತಹ ಅನೇಕರ ಪ್ರಾಣ ಉಳಿಸಿದ ಪುಣ್ಯ ರಕ್ತದಾನ ಮಾಡಿದ ಯುವಕರಿಗೆ ಸಲ್ಲುತ್ತದೆ ಎಂದು ಶಾರದಾಬಾಯಿ ತಿಳಿಸಿದರು.
ಕೂಡ್ಲಿಗಿ ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಗುಳಿಗಿ ವೀರೇಶ ಮಾತನಾಡಿ ಇಂದು ದೇಶದ ಪ್ರಧಾನಿ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ಬಹುಉಪಯುಕ್ತವಾದ ರಕ್ತದಾನ ಶಿಬಿರವನ್ನು ಯುವಮೋರ್ಚಾದಿಂದ ಆಯೋಜಿಸಿ ತಾವು ಸೇರಿದಂತೆ ಇತರೆ ಯುವಮೋರ್ಚ್ ಪದಾಧಿಕಾರಿಗಳೂ ಸಹ ರಕ್ತದಾನ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ ಪ್ರದೀಪಕುಮಾರ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿನಯ್ ಸೇರಿದಂತೆ ಇತರೆ ವೈದ್ಯರು, ಐಸಿಟಿಸಿಯ ಪ್ರಶಾಂತ್ , ಬಿಜೆಪಿ ಜಿಲ್ಲಾಕಾರ್ಯದರ್ಶಿ ಸೂರ್ಯಪಾಪಣ್ಣ, ಮಂಡಲ ಅಧ್ಯಕ್ಷ ಚನ್ನಪ್ಪ, ಮುಖಂಡ ಭೀಮೇಶ್ , ಟಿ ಜಿ ಮಲ್ಲಿಕಾರ್ಜುನ ಗೌಡ, ಪಟ್ಟಣಪಂಚಾಯತಿ ನಾಮನಿರ್ದೇಶಿತ ಸದಸ್ಯ ಗೌಡ್ರು ಸಂದೀಪ ಬಿಜೆಪಿ ಯುವಮೋರ್ಚಾ ತಾಲೂಕು ಪ್ರದಾನ ಕಾರ್ಯದರ್ಶಿ ಸಚಿನಕುಮಾರ, ಅಜೇಯ, ನಗರ ಘಟಕದ ಗುನ್ನಳ್ಳಿ ನಾರಾಯಣ, ಗಿರೀಶ, ಸೊಲ್ಲೇಶ, ಭರತ್ ರಾಮ್, ಉಗ್ರೇಶ, ಹಾಗೂ ಬಿಜೆಪಿ ಮುಖಂಡರು ಮತ್ತು ಇತರರು ಉಪಸ್ಥಿತರಿದ್ದರು.