
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.3 :-ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅವರು ನಾಮಪತ್ರ ಸಲ್ಲಿಸುವಾಗ ಸೂಚಕರಾಗಿ ಸಹಿ ಹಾಕಿದ್ದ ಬೊಪ್ಪಲಾಪುರ ಬಸವರಾಜ ಬಿಜೆಪಿ ತೊರೆದು ಕಾಂಗ್ರೇಸ್ ಸೇರಿದ್ದು ವಿಶೇಷವಾಗಿದೆ.. ಬಡೇಲಡುಕು ಗ್ರಾಮದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಸತೀಶ ಸೇರಿದಂತೆ ಉಪಾಧ್ಯಕ್ಷರು ಹಾಗೂ ಸದಸ್ಯರು ಕಾಂಗ್ರೇಸ್ ನ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜಶೇಖ್ ಹಾಗೂ ಕೂಡ್ಲಿಗಿ ಕಾಂಗ್ರೆಸ್ ಅಭ್ಯರ್ಥಿ ಡಾ ಶ್ರೀನಿವಾಸ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವಿತ್ತು ಇದರಲ್ಲಿ ಬಿಜೆಪಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸೂಚಕರಾಗಿ ಸಹಿ ಮಾಡಿದ್ದ ಬೊಪ್ಪಲಾಪುರ ಬಸವರಾಜ ಕಾಂಗ್ರೇಸ್ ಸೇರಿ ಅಚ್ಚರಿ ಮೂಡಿಸಿದರು.
ಬಡೇಲಡಕು ಗ್ರಾಮದ ಹಂಪಜ್ಜರ ಕೊಟ್ರೇಶ್, ತುಪ್ಪಾಕನಹಳ್ಳಿ ರಮೇಶ್, ನಾಗಮಣಿ ಜಿಂಕಲ್, ಕಾವಲಿ ಶಿವಪ್ಪನಾಯಕ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಕೋಗಳಿ ಮಂಜುನಾಥ, ಉದಯಜನ್ನು, ಇಂಜಿನಿಯರ್ ಶಫಿ, ನರಸಿಂಹನಗಿರಿ ವೆಂಕಟೇಶ್, ಎನ್.ಪಿ.ಮಂಜುನಾಥ, ಮಾರೇಶ್ ಮಡಿವಾಳರ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಡಿ.ಎಚ್.ದುರುಗೇಶ್, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಬಿ.ನಾಗರಾಜ ಇತರರು ಈ ಸಂದರ್ಭದಲ್ಲಿ ಸಾಕ್ಷಿಯಾಗಿದ್ದರು.