ಕೂಡ್ಲಿಗಿ : ಬಾವಿಯಲ್ಲಿ ಕಾಲುಜಾರಿ ಬಿದ್ದು ನೌಕರ ಸಾವು.

ಕೂಡ್ಲಿಗಿ.ಏ.24:- ರಾತ್ರಿವೇಳೆ ಬಹಿರ್ದೆಸೆಗೆಂದು ಹೋದಾಗ ರಸ್ತೆ ಪಕ್ಕದಲ್ಲಿದ್ದ ಬಾವಿಯಲ್ಲಿ ಕಾಲುಜಾರಿ ಬಿದ್ದು ಕೂಡ್ಲಿಗಿ ಪಟ್ಟಣದ ಸರ್ಕಾರಿ ನೌಕರನೋರ್ವ ಮೃತಪಟ್ಟ ಘಟನೆ ಏಪ್ರಿಲ್ 20ರಿಂದ ಏಪ್ರಿಲ್ 23ರ ಮಧ್ಯವಧಿಯಲ್ಲಿ ಜರುಗಿದೆ. ಕೂಡ್ಲಿಗಿಯ ರೇಷ್ಮೆ ಇಲಾಖೆಯ ಜವಾನನಾಗಿದ್ದ ಕೆ. ಬಸವರಾಜ (40)ಎಂದು ತಿಳಿದಿದ್ದು ಈತನು ಕೂಡ್ಲಿಗಿ ಪಟ್ಟಣದ ಹೊರಭಾಗದಲ್ಲಿರುವ ಸಂಡೂರು ರಸ್ತೆಯ ಪಕ್ಕದ ಕಚ್ಚಾ ದಾರಿಯಲ್ಲಿ ರಾತ್ರಿವೇಳೆ ಬಹಿರ್ದೆಸೆಗೆ ನಡೆದುಕೊಂಡು ಹೋಗುತ್ತಿರುವಾಗ ಪಕ್ಕದಲ್ಲಿರುವ ಬಾವಿಗೆ ಆಕಸ್ಮಿಕ ಕಾಲುಜಾರಿ ಬಿದ್ದು ಈಜು ಬಾರದೆ ಬಾವಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆಂದು ಮತ್ತು ಬೀಳುವಾಗ ಬಾವಿಯ ಕಲ್ಲಿಗೆ ತಲೆ ತಗುಲಿ ಗಾಯವಾಗಿ ಮೃತಪಟ್ಟಿರಬಹುದೆಂದು ಮೃತನ ಹೆಂಡತಿ ನಿರ್ಮಲ ಇಂದು ಬೆಳಿಗ್ಗೆ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.