
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 28 :- ರಸ್ತೆ ದಾಟುವ ವ್ಯಕ್ತಿಯೋರ್ವನಿಗೆ ಭಾನುವಾರ ಮಧ್ಯಾಹ್ನ ಸಾರಿಗೆ ಸಂಸ್ಥೆ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ವ್ಯಕ್ತಿ ಬಳ್ಳಾರಿ ವಿಮ್ಸ್ ನಲ್ಲಿ ಸೋಮವಾರ ಮಧ್ಯಾಹ್ನ ಮೃತಪಟ್ಟ ಘಟನೆ ಕೂಡ್ಲಿಗಿ ಬಸ್ ನಿಲ್ದಾಣದ ಮುಂದೆ ಜರುಗಿದೆ.
ಆಂಧ್ರಪ್ರದೇಶದ ವಿಡಪನಕಲ್ಲು ಗ್ರಾಮದ ಪಾಲ್ತೂರ್ ವೀರೇಶಪ್ಪ (70) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಈತನು ಕೂಡ್ಲಿಗಿ ಬಸ್ ನಿಲ್ದಾಣದ ಮುಂದುಗಡೆ ಯಾದವ ಸರ್ಕಲ್ ಬಳಿ ಭಾನುವಾರ ಮಧ್ಯಾಹ್ನ ರಸ್ತೆಯನ್ನು ದಾಟುವಾಗ ಕೂಡ್ಲಿಗಿ ಘಟಕದ ಬಸ್ಸಿನ ಚಾಲಕ ಮೆಹಬೂಬ್ ಎಂಬಾತನು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ ತೀವ್ರಗಾಯಗೊಂಡ ವ್ಯಕ್ತಿಯನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಬಳ್ಳಾರಿ ವಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿತ್ತು ಆದರೆ ಗಾಯಾಳು ಎರಡು ದಿನ ಕೋಮಾ ಸ್ಥಿತಿಯಲ್ಲಿದ್ದು ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ವಿಮ್ಸ್ ನಲ್ಲಿ ಮೃತಪಟ್ಟಿದ್ದಾನೆಂದು ಬಸ್ಸಿನ ಚಾಲಕನ ವಿರುದ್ಧ ಗಂಗಾಧರ ನೀಡಿದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.