ಕೂಡ್ಲಿಗಿ : ಬಡ್ತಿ ಮುಖ್ಯಗುರುಗಳ ಸಂಘ ಅಸ್ತಿತ್ವಕ್ಕೆ.


ಕೂಡ್ಲಿಗಿ. ಜು. 17 :-  ಪಟ್ಟಣದ ಹೊರವಲಯದ ಅಮರದೇವರಗುಡ್ಡ ಗ್ರಾಮದ ಸಮೀಪದಲ್ಲಿರುವ ಆದರ್ಶ ಶಾಲೆಯೊಂದರಲ್ಲಿ ಶನಿವಾರ ಸರ್ಕಾರಿ ಪ್ರೌಢಶಾಲಾ ಬಡ್ತಿ ಮುಖ್ಯಗುರುಗಳ ಸಂಘದ ವಿಜಯನಗರ ಜಿಲ್ಲಾ ಪಧಾಧಿಕಾರಿಗಳ ಸಮ್ಮುಖದಲ್ಲಿ ಕೂಡ್ಲಿಗಿ ತಾಲೂಕು ಘಟಕವನ್ನು ರಚಿಸಲಾಯಿತು.
ವಿಜಯನಗರ ಜಿಲ್ಲೆಯ  ಬಡ್ತಿ ಮುಖ್ಯಗುರುಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಅಕ್ಕಮಹಾದೇವಿ, ಸಂಘಟನಾ ಕಾರ್ಯದರ್ಶಿ ಸುರೇಖಾ, ಸಹಕಾರ್ಯದರ್ಶಿ ನಾಗಭೂಷಣಗೌಡ ಹಾಗೂ ಕೂಡ್ಲಿಗಿ ಆದರ್ಶ ಶಾಲೆಯ ಎಲ್ ಲಕ್ಷ್ಮಣಸಿಂಗ್ ಇವರುಗಳ ಸಮ್ಮುಖದಲ್ಲಿ ಸಭೆ ಸೇರಿ ಕೂಡ್ಲಿಗಿ ತಾಲೂಕಿನ ಸರ್ಕಾರಿ ಪ್ರೌಢಶಾಲಾ ಬಡ್ತಿ ಮುಖ್ಯಗುರುಗಳ ಸಂಘವನ್ನು ರಚಿಸಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಿ ಘೋಷಿಸಿದಂತೆ ಪಧಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ.
ಅಧ್ಯಕ್ಷರಾಗಿ ಹಿರೇಹೆಗ್ಡಾಳ್ ಪ್ರೌಢಶಾಲೆಯ  ಪಿ.ಡಿ.ರಂಗಪ್ಪ,  ಉಪಾಧ್ಯಕ್ಷರಾಗಿ ಶಿವಪುರ ಬಿ. ಶರಣಬಸಪ್ಪ, ಪ್ರಧಾನಕಾರ್ಯದರ್ಶಿಯಾಗಿ ಸೂಲದಹಳ್ಳಿ  ಡಿ.ಬೋರಯ್ಯ, ಖಜಾಂಚಿಯಾಗಿ ಕೆಂಚಮಲ್ಲನಹಳ್ಳಿಯ ವಿ.ಕೊಟ್ರೇಶ್, ಸಂಘಟನಾ ಕಾರ್ಯದರ್ಶಿಗಳಾಗಿ ಬಡೇಲಡಕು ರಾಮಕೃಷ್ಣ ಮುಸಲೆ, ಚೌಡಾಪುರ ಚಂದ್ರಶೇಖರ, ಹಿರೇಕುಂಬಳಗುಂಟೆ ಸುಜಾತ ಇವರುಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷ ಪಿ ಡಿ ರಂಗಪ್ಪ ಹಾಗೂ ಡಿ ಬೋರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Attachments area