ಕೂಡ್ಲಿಗಿ ಪ ಪಂ ನಿಂದ ತ್ಯಾಜ್ಯ ವಿಂಗಡಣೆ ಅಮೃತ ದಿವಸ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ.30 :- ಪಟ್ಟಣದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಬುಧವಾರ ಪಟ್ಟಣಪಂಚಾಯತಿ ಮುಖ್ಯಾಧಿಕಾರಿಗಳು, ಕಿರಿಯ ಆರೋಗ್ಯ ನಿರೀಕ್ಷಕರು  ಹಾಗೂ ಪೌರಕಾರ್ಮಿಕರು ಸೇರಿ ತ್ಯಾಜ್ಯ ವಿಂಗಡಣೆ ಅಮೃತ ದಿವಸ ಕಾರ್ಯಕ್ರಮ ನಡೆಸಿದರು.
ರಾಜ್ಯದ   ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ  ಸೆಪ್ಟೆಂಬರ್ 29 ರಂದು ತ್ಯಾಜ್ಯ ವಿಂಗಡಣೆ ಅಮೃತ ದಿವಸವನ್ನಾಗಿ ಆಚರಿಸಬೇಕು ಎಂಬ ಆದೇಶದಂತೆ ಕೂಡ್ಲಿಗಿ ಪಟ್ಟಣಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್, ಪಂಚಾಯತಿಯ ಪ್ರಭಾರಿ ಕಿರಿಯ ಆರೋಗ್ಯ ನಿರೀಕ್ಷಕ ರಾಜಾಭಕ್ಷಿ ಮತ್ತು ಪೌರಕಾರ್ಮಿಕರಾದ ಪರಶುರಾಮ ಹಾಗೂ ಇತರರು ಸೇರಿ ಕೈಗೆ ಗ್ಲೋಜ್ ಹಾಕುವ ಮೂಲಕ ತ್ಯಾಜ್ಯ ವಿಂಗಡಣೆ ಕಾರ್ಯದಲ್ಲಿ ತೊಡಗುವ ಮೂಲಕ  ತ್ಯಾಜ್ಯ ವಿಂಗಡಣೆ ಅಮೃತ ದಿವಸ ಕಾರ್ಯಕ್ರಮವನ್ನು  ಯಶಸ್ವಿಯಾಗಿ ನಡೆಸಿದರು.