ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಅ 24 :- ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ದಸರಾ ಹಬ್ಬದ ಒಬ್ಬತ್ತನೇ ದಿನದ ಆಯುಧ ಪೂಜಾ ಹಾಗೂ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಮುಖ್ಯಾಧಿಕಾರಿ ನೇತೃತ್ವದಲ್ಲಿ ಸಿಬ್ಬಂದಿಗಳು ಸೇರಿ ಆಚರಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡುತ್ತ ಪುರುಷರಷ್ಟೇ ಮಹಿಳೆಯರು ಪರಾಕ್ರಮಿಗಳು ಎನ್ನುವುದನ್ನು ಅಂದೇ ಕಿತ್ತೂರು ಸಂಸ್ಥಾನವನ್ನೇ ಆಳಿ ಮೆರೆದ ಚೆನ್ನಮ್ಮಾಜಿ ಅವರೇ ಮುಖ್ಯ ಸಾಕ್ಷಿಯಾಗಿದ್ದು ಅವರ ಹೋರಾಟವನ್ನು ತಿಳಿಸಿದರು.
ಪಟ್ಟಣ ಪಂಚಾಯತಿಯ ವಾಹನಗಳು ಸೇರಿದಂತೆ ಇತರೆ ಆಯುಧಗಳಿಗೆ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಆಯುಧ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಕಿರಿಯ ಆರೋಗ್ಯ ನಿರೀಕ್ಷಕಿ ಗೀತಾವಿಜೇತ್, ಲೆಕ್ಕ ಪರಿಶೋಧಕ ಗುರುರಾಜ,ಮೇಸ್ತ್ರಿ ಪರಶುರಾಮ, ಹನುಮಂತ,ದ್ವಿತೀಯ ದರ್ಜೆ ಸಹಾಯಕ ರಾಜಾಭಕ್ಷಿ, ನರಸಿಂಹಪ್ಪ, ಭೀಮ, ಓಬಳೇಶ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.