ಕೂಡ್ಲಿಗಿ ಪ. ಪಂ ಉಪಾಧ್ಯಕ್ಷರಿಗೆ ಪುತ್ರ ವಿಯೋಗ

ಕೂಡ್ಲಿಗಿ. ಮೇ. 2 :- ಪಟ್ಟಣ ಪಂಚಾಯತಿಯ ಉಪಾಧ್ಯಕ್ಷೆ ಊರಮ್ಮ ಅವರ ಪುತ್ರ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ಅಂಬಲಿ ನಾಗರಾಜ (48)ಕಳೆದ ಸಂಜೆ ಕೂಡ್ಲಿಗಿಯ ಅವರ ಸ್ವಗೃಹದಲ್ಲಿ ನಿಧನಹೊಂದಿದ್ದು ಇಂದು ಬೆಳಿಗ್ಗೆ ಅವರ ಅಂತ್ಯಕ್ರಿಯೆ ಜರುಗಿತು.
ಕೆಲದಿನಗಳಿಂದ ಅನಾರೋಗ್ಯ ಪೀಡಿತರಾಗಿ ಬಳಲುತ್ತಿದ್ದ ನಾಗರಾಜ ಕಳೆದ ಸಂಜೆ ನಿಧನರಾಗಿದ್ದರೆ ಪಟ್ಟಣದ 15ನೇ ವಾರ್ಡ್ ವಾಸಿಯಾಗಿದ್ದು ,ವಾಲ್ಮೀಕಿ ಯುವ ಮುಖಂಡ ಕುಸ್ತಿ ಪೈಲ್ವನ್ ಸಹ ಆಗಿದ್ದರು
ಅವರು ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ತಾಯಿ ಊರಮ್ಮ ಮತ್ತು ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕೆಪಿಸಿಸಿ ಸದಸ್ಯ ಲೋಕೇಶ್ ವಿ ನಾಯಕ ಸೇರಿದಂತೆ ಇತರೆ ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಸ್ನೇಹಿತರು ಬಂಧುಗಳು ಸಂತಾಪ ಸೂಚಿಸಿದ್ದಾರೆ.