ಕೂಡ್ಲಿಗಿ ಪ. ಪಂ.ಉಪಚುನಾವಣೆ. 1ನೇ ವಾರ್ಡ್ ಕಾಂಗ್ರೇಸ್, 12ನೇವಾರ್ಡ್ ಜೆಡಿಎಸ್ ಗೆ ಜಯ.

ಕೂಡ್ಲಿಗಿ.ಮಾ. 31:- ಇಂದು ಬೆಳಿಗ್ಗೆ ಕೂಡ್ಲಿಗಿ ಪಟ್ಟಣ ಪಂಚಾಯತಿ ಉಪಚುನಾವಣೆಯ ಮತ ಯಂತ್ರದ ಫಲಿತಾಂಶ ಹೊರಬಿದ್ದಿದ್ದು 1ನೇ ವಾರ್ಡಿನಿಂದ ಕಾಂಗ್ರೇಸ್ ನ ಲೀಲಾವತಿ ಪ್ರಭಾಕರ ಮತ್ತು 12ನೇ ವಾರ್ಡಿನಿಂದ ಜೆಡಿಎಸ್ ನ ಸರಸ್ವತಿ ರಾಘವೇಂದ್ರ ಜಯಶೀಲರಾಗಿದ್ದರೆ.


ಈ ಎರಡು ವಾರ್ಡುಗಳು ಈ ಹಿಂದೆ ಇದ್ದ ಸದಸ್ಯರು ಕೋವಿಡ್ ನಿಂದ ಮೃತಪಟ್ಟಿದ್ದರಿಂದ ಎರಡು ಸ್ಥಾನಗಳು ತೆರವಾಗಿದ್ದವು ಇತ್ತೀಚಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಉಪಚುನಾವಣೆ ನಡೆಸಲಾಗಿತ್ತು ಮಾರ್ಚ್ 17ರಂದು ನಾಮಪತ್ರ ಸಲ್ಲಿಕೆಯ ಕೊನೆದಿನವಾಗಿ 1ನೇ ವಾರ್ಡಿಗೆ 3ನಾಮಪತ್ರ ಮತ್ತು 12ನೇ ವಾರ್ಡಿನಿಂದ 4ನಾಮಪತ್ರ ಸಲ್ಲಿಕೆಯಾಗಿದ್ದವು ಮಾರ್ಚ್29ರಂದು ಮತಯಂತ್ರದ ಮೂಲಕ ನಡೆದ ಮತದಾನ ಇಂದು ಬೆಳಿಗ್ಗೆ 8ಗಂಟೆಗೆ ಮತ ಎಣಿಕೆ ಫಲಿತಾಂಶ ಹೊರಬಿದ್ದಿದ್ದು 1ನೇ ವಾರ್ಡಿನಿಂದ ಕಾಂಗ್ರೇಸ್ ನ ಲೀಲಾವತಿ ಪ್ರಭಾಕರ ಮತ್ತು 12ನೇ ವಾರ್ಡಿನಿಂದ ಜೆಡಿಎಸ್ ನ ಸರಸ್ವತಿ ರಾಘವೇಂದ್ರ ಜಯಗಳಿಸಿ ಪಟ್ಟಣ ಪಂಚಾಯತಿ ಸದಸ್ಯರುಗಳಾಗಿ ಆಯ್ಕೆ ಯಾಗಿದ್ದಾರೆ.