ಕೂಡ್ಲಿಗಿ ಪ್ರಮುಖ ರಸ್ತೆಗಳಿಗೆ ಲಾರಿಯಿಂದ ಸ್ಯಾನಿಟೈಸರ್.

ಕೂಡ್ಲಿಗಿ. ಮೇ. 19:- ಪಟ್ಟಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತೆಯಾಗಿ ಜನರ ಆರೋಗ್ಯ ಅರಿತು ಪಟ್ಟಣದ ಎಲ್ಲಾ ಸದಸ್ಯರ ಜೊತೆಗೆ ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂಡೂರಿನಿಂದ ಬಂದ ಲಾರಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಇಂದು 12ಗಂಟೆಯಿಂದ ಸ್ಯಾನಿಟೈಸರ್ ಮಾಡಿಸುವಲ್ಲಿ ಮುಂದಾಗಿದ್ದರು.
ಕೂಡ್ಲಿಗಿ ಪಟ್ಟಣದ ಕೊತ್ತಲಅಂಜನೇಯ ದೇವಸ್ಥಾನದ ಮುಂದಿನಿಂದ ಪ್ರಮುಖ ರಸ್ತೆಗಳಲ್ಲಿ ಸಂಡೂರಿನ ಬಿಕೆಜಿ ಮೈನಿಂಗ್ ನ 20ಸಾವಿರ ಲೀಟರ್ ಸಾಮರ್ಥ್ಯದ ಲಾರಿಯಲ್ಲಿ ಸ್ಯಾನಿಟೈಸರ್ ಸಂಗ್ರಹಿಸಿ ಪ್ರಮುಖ ರಸ್ತೆಯಲ್ಲಿ ತೆರಳಿ ರೋಗನಿರೋಧಕ ದ್ರಾವಣ ಸಿಂಪಡಣೆ ಮಾಡಿಸುವಲ್ಲಿ ಪಟ್ಟಣ ಪಂಚಾಯತಿಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮತ್ತು ಪೌರಕಾರ್ಮಿಕರು ಸ್ಯಾನಿಟೈಸರ್ ಸಿಂಪಡಣೆಗೆ ಚಾಲನೆ ನೀಡಿದರು.