ಕೂಡ್ಲಿಗಿ ಪೋಲೀಸರ ದಾಳಿ,
 ಗಾಂಜಾ ಜಪ್ತಿ – ಓರ್ವನ ಬಂಧನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.16 :- ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಕೂಡ್ಲಿಗಿ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿ ಆತನ ಬಳಿ 255ಗ್ರಾಂ ತೂಕದ ಗಾಂಜಾ ಹಾಗೂ 450ರೂ ನಗದು ಹಣ  ಜಪ್ತಿ ಮಾಡಿಕೊಂಡ ಘಟನೆ ಪಟ್ಟಣದ ಹೊರವಲಯದ ಉಜ್ಜಿನಿ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಜರುಗಿದೆ.
ನೆಲಬೊಮ್ಮನಹಳ್ಳಿಯ ಈರಣ್ಣ (48) ಬಂಧಿತ ಆರೋಪಿಯಾಗಿದ್ದಾನೆ. ಈತನು ಪಟ್ಟಣದ ಹೊರವಲಯದ ಉಜ್ಜಿನಿ ರಸ್ತೆಯ ಹುಣಿಸೇಮರದಡಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾಗ ಇದರ ಮಾಹಿತಿ ಆಧಾರಿಸಿದ ಕೂಡ್ಲಿಗಿ ಠಾಣಾ ಪಿಎಸ್ಐ ಧನುಂಜಯ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಆತನ  ಬಳಿ ಇದ್ದ 25,500ರೂ ಮೌಲ್ಯದ 255ಗ್ರಾಂ ಗಾಂಜಾ ಹಾಗೂ ಆತನ ಬಳಿ ಇದ್ದ 450ರೂ ನಗದು ಹಣ ಜಪ್ತಿ ಮಾಡಿಕೊಂಡಿದ್ದಾರೆ. ಸರ್ಕಾರದ ಪರವಾಗಿ ಕೂಡ್ಲಿಗಿ ಪಿಎಸ್ಐ ಧನುಂಜಯ  ನೀಡಿದ ದೂರಿನಂತೆ ಎಎಸ್ ಐ ಬಸವರಾಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.