ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ.

ಕೂಡ್ಲಿಗಿ. ಅ. 26:- ಪಟ್ಟಣದ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪಿಸ್ತೂಲ್, ಗನ್, ಇತರೆ ಸಾಮಾನುಗಳನ್ನು ಇಟ್ಟು ಭಾನುವಾರ ಸಂಜೆ ಆಯುಧ ಪೂಜೆ ಮಾಡಲಾಯಿತು. ಭಾನುವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಯುಧ ಪೂಜೆನೆರವೇರಿಸಿದ್ದು ಈ ಬಾರಿ ಕೂಡ್ಲಿಗಿ ಸಿಪಿಐ ಪಂಪನಗೌಡ. ಪಿಎಸ್ಐ ತಿಮ್ಮಣ್ಣ ಚಾಮನೂರ್ ಕುಟುಂಬ ಸೇರಿದಂತೆ ಸಿಬ್ಬಂದಿಗಳ ಕುಟುಂಬದವರೆಲ್ಲರೂ ಬಂದು ಪೂಜಾ ಕಾರ್ಯದಲ್ಲಿ ಬಾಗವಹಿಸಿ ನವರಾತ್ರಿಯ ವಿಶೇಷ ಪೂಜೆ ಸಲ್ಲಿಸಿದರು ಹಾಗೂ ದೇವಿ ಕೃಪೆಗೆ ಪಾತ್ರರಾದರು