
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 8 :- ಗಂಗಾವತಿಯಿಂದ ಬಂಗಾರುಪೇಟೆಗೆ ಲಾರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿದ ಕೂಡ್ಲಿಗಿ ಪಿಎಸ್ಐ ಹಾಗೂ ಸಿಬ್ಬಂದಿ ಪಟ್ಟಣದ ಹೊರವಲಯದ ಹೈವೇ 50ರ ಕೊಟ್ಟೂರು ರಸ್ತೆಯ ಪ್ಲೆಓವರ್ ಬಳಿ ದಾಳಿ ನಡೆಸಿ ಅದರಲ್ಲಿದ್ದ 220ಮೂಟೆ ಅಕ್ಕಿ ಹಾಗೂ ಲಾರಿಯನ್ನು ಜಪ್ತಿಗೊಳಿಸಿ ಲಾರಿ ಚಾಲಕನನ್ನು ಬಂಧಿಸಿರುವ ಘಟನೆ ಶುಕ್ರವಾರ ಜರುಗಿದೆ.
ಕೂಡ್ಲಿಗಿ ಪಿಎಸ್ಐ ಧನುಂಜಯ ಅಕ್ರಮ ಪಡಿತರ ಅಕ್ಕಿ ಸಾಗಾಟವಾಗುತ್ತಿರುವ ಖಚಿತ ಮಾಹಿತಿ ಆಧಾರಿಸಿ ಸಿಬ್ಬಂದಿಯೊಂದಿಗೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರ ಕೊಟ್ಟೂರು ಬೈಪಾಸ್ ಬಳಿ ನಿಂತಿದ್ದು ಕೆಎ 16, ಡಿ 6845ನೇದ್ದರ ಲಾರಿಯನ್ನು ತಡೆದು ನಿಲ್ಲಿಸಲಾಗಿ ನಂತರ ಪರಿಶೀಲನೆ ನಡೆಸಲಾಗಿ ಲಾರಿಯಲ್ಲಿ ಅಂದಾಜು 220 ಅಕ್ಕಿ ಮೂಟೆಗಳಿದ್ದು ಇದಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ತೋರಿಸಿದ ದಾಖಲಾತಿ ಪರಿಶೀಲನೆ ನಡೆಸಲಾಗಿ ದಾಖಲಾತಿಗೂ ಅಕ್ಕಿ ಮೂಟೆಗಳಿರುವುದಕ್ಕೂ ಸಂಬಂಧವಿರದೆ ಇದ್ದು ಲಾರಿಯನ್ನು ಪೊಲೀಸ್ ಠಾಣಾ ಆವರಣದಲ್ಲಿ ತಂದು ನಿಲ್ಲಿಸಿ ತಾಲೂಕು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿ ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್ ಸೇರಿದಂತೆ ಕೂಡ್ಲಿಗಿ ಆಹಾರ ನಿರೀಕ್ಷಕ ರಜಿತ್ ಕುಮಾರ ಹಾಗೂ ಸಿಬ್ಬಂದಿ ಅಕ್ಕಿಯನ್ನು ಪರಿಶೀಲನೆ ನಡೆಸಿ ನೋಡಲಾಗಿ ಪಡಿತರ ಅಕ್ಕಿಯನ್ನು ಜನರಿಂದ ಕಡಿಮೆ ಬೆಲೆಗೆ ಪಡೆದು ಹೆಚ್ಚಿನ ಹಣ ಮಾಡಿಕೊಳ್ಳಲು ಅಕ್ಕಿಯನ್ನು ಪಾಲಿಶ್ ಮಾಡಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ತಿಳಿದು ಆಹಾರ ನಿರೀಕ್ಷಕ ರಜಿತ್ ಕುಮಾರ ಆರ್ ಅವರು ಲಾರಿ ಚಾಲಕ, ಲಾರಿ ಮಾಲೀಕ ಹಾಗೂ ಅಕ್ಕಿಯನ್ನು ಲೋಡ್ ಮಾಡಿಸಿದವರ ವಿರುದ್ಧ ನೀಡಲಾದ ದೂರಿನಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
One attachment • Scanned by Gmail