ಕೂಡ್ಲಿಗಿ ಪಿಎಸ್ಐ ಹಳೇ ಡಕೋಟಾ ಜೀಪಿಗೆ ಮುಕ್ತಿ

ಕೂಡ್ಲಿಗಿ.ಜ.5:- ಕೂಡ್ಲಿಗಿ, ಸಂಡೂರು ಹಾಗೂ ಹಗರಿಬೊಮ್ಮನಹಳ್ಳಿ ವ್ಯಾಪ್ತಿಯ 50ಕ್ಕೂ ಹೆಚ್ಚು ಗ್ರಾಮಗಳನ್ನೊಳಗೊಂಡ ಹಾಗೂ ಹೈವೇ 50ರ ವ್ಯಾಪ್ತಿಯ ಕೂಡ್ಲಿಗಿ ಠಾಣಾ ಪಿಎಸ್ಐಯ ಜೀಪೊಂದು ಡಕೋಟಾವಾಗಿದ್ದು ಮನಗಂಡ ಇದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸೋಮವಾರ ಬೊಲೊರೋ ವಾಹನವೊಂದನ್ನು ನೀಡಿದ್ದು ಇಂದು ಪೊಲೀಸ್ ಠಾಣಾ ಆವರಣ ಸೇರಿದೆ. ಕೂಡ್ಲಿಗಿ ಠಾಣೆಯ ಪಿಎಸ್ಐ ಟಾಟಾ ಸ್ಪೆಸಿಯೋ ವಾಹನವು ಅತೀ ಹಳೆಯದಾಗಿದ್ದು ಗುಡು ಗುಡು ಸೌಂಡ್ ಕೇಳುತ್ತಿತ್ತು ಅಲ್ಲದೆ ಎಷ್ಟೋ ಬಾರಿ ಆ ವಾಹನ ಬೇಗ ಸ್ಟಾರ್ಟ್ ಆಗದೆ ಠಾಣೆಗೆ ಬಂದ ಜನಗಳಿಂದ ನೂಕಿ ಸ್ಟಾರ್ಟ್ ಮಾಡಿದ ಅನೇಕ ಉದಾಹರಣೆ ಸಹ ಇದೆ ಅಲ್ಲದೆ ಕೂಡ್ಲಿಗಿ ಮೂಲಕ ಹೈವೇಯಲ್ಲಿ ಹೋಗುವ ಅನೇಕ ಗಣ್ಯರು ಸಚಿವರಿಗೆ ಎಸ್ಕಾರ್ಟ್ ಕೊಡಲು ಹೋದಾಗ ಈ ಜೀಪು ಹೋಗುವ ವೇಗ ಅದರ ಸೌಂಡ್ ನಿಂದ ರೋಸಿಹೋಗಿದ್ದು ಉಂಟು ಅಲ್ಲದೆ ಹೈವೇ 50ಪಟ್ಟಣದ ಹೊರವಲಯದಲ್ಲಿ ಹಾದುಹೋಗಿದ್ದು ಅಪಘಾತ ಹೆಚ್ಚಾಗುತ್ತಿರುವುದರಿಂದ ಘಟನಾ ಸ್ಥಳಕ್ಕೆ ಧಾವಿಸಲು ಈ ಹಳೇ ವಾಹನ ಕೆಲವೊಮ್ಮೆ ಸ್ಟಾರ್ಟ್ ಆಗದೇ ಇದ್ದಾಗ ಸಿಪಿಐ ಜೀಪು ತೆಗೆದುಕೊಂಡ ಉದಾಹರಣೆ ಸಹ ಇದೆ ಅಲ್ಲದೆ ಸ್ಥಳೀಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರಿಗೆ ಬಂದೋಬಸ್ತ್ ಕಲ್ಪಿಸಲು ಹೋದಾಗಲೂ ಶಾಸಕರು ಜಿಲ್ಲಾ ಪೊಲೀಸರಿಗೆ ಮಾಹಿತಿ ತಿಳಿಸಿ ಬೇರೆ ಜೀಪನ್ನು ವ್ಯವಸ್ಥೆ ಮಾಡಬೇಕಾ ಅಥವಾ ನೀವೇ ತರಿಸಿಕೊಳ್ತೀರಾ ಎಂದು ಹಳೇ ಜೀಪನ್ನು ಕಂಡು ಹೇಳಿದ್ದರು ಅದೆಲ್ಲದಕ್ಕೆ ಮುಕ್ತಿ ದೊರೆತು ಸೋಮವಾರ ಕೂಡ್ಲಿಗಿ ಠಾಣೆಗೆ ಬೊಲೊರೋ ವಾಹನ ನೀಡಿದ್ದು ಇಂದು ಬಳ್ಳಾರಿಗೆ ಹಳೇ ಜೀಪು ಸೇರಿದ್ದು ಬೊಲೊರೋ ವಾಹನ ಕೂಡ್ಲಿಗಿ ಠಾಣೆಗೆ ಬಂದಿದೆ.