ಕೂಡ್ಲಿಗಿ : ಪತ್ನಿಯೊಂದಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್ ಟಿ  ಶ್ರೀನಿವಾಸ್ ಮತಯಾಚನೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.10 :- ತಾಲೂಕಿನ ನರಸಿಂಹಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 86ರಲ್ಲಿ ಇಂದು ಬೆಳಿಗ್ಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ  ಅಭ್ಯರ್ಥಿ ಡಾ.ಎನ್ ಟಿ  ಶ್ರೀನಿವಾಸ್ ತಮ್ಮ ಪತ್ನಿ ಡಾ. ಪುಷ್ಪಾ ಶ್ರೀನಿವಾಸರೊಂದಿಗೆ ತೆರಳಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು.