ಕೂಡ್ಲಿಗಿ ನೂತನ ಸಿಪಿಐಯಾಗಿ ಸುರೇಶ ತಳವಾರ ಇಂದು ಅಧಿಕಾರ ಸ್ವೀಕಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 4 :- ಕೂಡ್ಲಿಗಿಯ ನೂತನ ಸಿಪಿಐಯಾಗಿ  ಸುರೇಶ ತಳವಾರ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದಿದೆ.
ಈ ಹಿಂದೆ ಕೂಡ್ಲಿಗಿ ಸಿಪಿಐಯಾಗಿದ್ದ ವಸಂತ ವಿ ಅಸೋದೆ ಅವರು ಸರ್ಕಾರದ ಪೊಲೀಸ ಇಲಾಖೆಯ ವರ್ಗಾವಣೆ ಆದೇಶದಂತೆ ಮೊಳಕಾಲ್ಮುರು ಸಿಪಿಐಯಾಗಿ ವರ್ಗಾವಣೆಯಾಗಿದ್ದರಿಂದ ಅವರ ಸ್ಥಾನಕ್ಕೆ ಕಂಪ್ಲಿ ಪಿಐಯಾಗಿದ್ದ ಸುರೇಶ ತಳವಾರ ಸರ್ಕಾರದ ಆದೇಶದಂತೆ  ಇಂದು ಸಂಜೆಯೊಳಗೆ ಕೂಡ್ಲಿಗಿ ನೂತನ ಸಿಪಿಐಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದಿದೆ.
ಇವರು ಸತತ 20ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ  ಸೇವೆಯಲ್ಲಿದ್ದು ಗಂಗಾವತಿ ಗ್ರಾಮೀಣ ಠಾಣೆ  ಸೇರಿದಂತೆ ಇತರೆಡೆ ಕರ್ತವ್ಯ ನಿರ್ವಹಿಸಿದ  ಖಡಕ್  ಅಧಿಕಾರಿ ಎಂದು ತಿಳಿದಿದೆ.

One attachment • Scanned by Gmail