ಕೂಡ್ಲಿಗಿ : ನೀರಿನ ಹೊಂಡದಲ್ಲಿ ಮುಳುಗಿ ಬಾಲಕ ಸಾವು- ಪತ್ತೆಯಾಗದ ಶವ

ಕೂಡ್ಲಿಗಿ.ಮೇ. 3:- ಸ್ನೇಹಿತರ ಜೊತೆಗೆ ಹೋಗಿದ್ದ 17 ವರ್ಷದ ಬಾಲಕನೋರ್ವ ಕಲ್ಲುಕುಟಿರಿಯಲ್ಲಿರುವ ಹೊಂಡದ ನೀರಿನಲ್ಲಿಳಿದು ಈಜುಬಾರದೇ ಮುಳುಗಿ ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ಸಮೀಪದ ಚಿಕ್ಕಕೆರೆಯಾಗಿನಹಳ್ಳಿಯ ನಿರ್ಕಲ್ಲಪ್ಪನ ಆಂಜನೇಯ ಗುಡಿ ಹತ್ತಿರದಲ್ಲಿ ಭಾನುವಾರ ಸಂಜೆ ಜರುಗಿದೆ
ಕೂಡ್ಲಿಗಿ ಗ್ಯಾರೇಜ್ ಮ್ಯಾಕಾನಿಕ್ ಮಾಬು ಎಂಬುವರ ಮಗ ಆಫ್ರಿದ್ (17) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಾಲಕ ಎಂದು ತಿಳಿದಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೂಡ್ಲಿಗಿ ಅಗ್ನಿಶಾಮಕ ಸಿಬ್ಬಂದಿ ರಾತ್ರಿವರೆಗೂ ನೀರಿನಲ್ಲಿ ಶೋಧ ನಡೆಸಿದರೂ ಬಾಲಕನ ಶವ ಸಿಗದೆ ಇದ್ದು ಮೃತ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ ಪಿ, ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ, ಕೂಡ್ಲಿಗಿ ಪಿಎಸ್ಐ ಸುರೇಶ ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.