ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಶ್ರೀಸಿದ್ದರಾಮೇಶ್ವರ ಜಯಂತಿ.

ಕೂಡ್ಲಿಗಿ.ಜ.14:-ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ಬೆಳಿಗ್ಗೆ ಶ್ರೀ ಸಿದ್ದರಾಮೇಶ್ವರ 849ನೇ ಜಯಂತಿಯನ್ನು ಆಚರಿಸಲಾಯಿತು. ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮಹಾಬಲೇಶ್ವರ ಶ್ರೀ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡುತ್ತ ಶ್ರೀ ಸಿದ್ದರಾಮೇಶ್ವರರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು. ತಾಲೂಕು ಬೋವಿ ಸಂಘದ ಅಧ್ಯಕ್ಷ ವಿ. ಜಿ. ಹನುಮಂತಪ್ಪ ಸಾಣೇಹಳ್ಳಿ ಮಾತನಾಡಿ ಶ್ರೀ ಸಿದ್ದರಾಮೇಶ್ವರರು ಬೋವಿ ಸಮಾಜಕ್ಕಲ್ಲದೆ ಇತರೆ ಸಮಾಜಕ್ಕೂ ಆದರ್ಶಪ್ರಾಯರಾಗಿದ್ದಾರೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ನಮ್ಮ ಜನ್ಮ ಸಾರ್ಥಕವೆಂದು ತಿಳಿಸಿದರು. ಈ ಸಂಧರ್ಭದಲ್ಲಿ ಬೋವಿ ಸಂಘದ ತಾಲೂಕು ಉಪಾಧ್ಯಕ್ಷರಾದ ಚಂದ್ರಶೇಖರಪುರದ ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಹುರುಳಿಹಾಳ್, ಸಂಘಟನಾ ಕಾರ್ಯದರ್ಶಿ ಮಾರೇಶ್, ಸಮಾಜದ ಹಿರಿಯ ಮುಖಂಡರಾದ ರವಿ, ಭೀಮಪ್ಪ, ಎ.ಡಿ ಗುಡ್ಡ ಹುಲಗಪ್ಪ, ಓಬಳೇಶ್, ನಾಗರಾಜ, ಸಂಚಾಲಕರಾದ ಪವನ್ ಕುಮಾರ್ ಹಾಗೂ ಸಾಣೆಹಳ್ಳಿ ಘಟಕದ ಭೋವಿ ಸಂಘದ ಅಧ್ಯಕ್ಷರಾದ ಡಿ ಕೊಟ್ರೇಶ್ ಹಾಗೂ ಕಾರ್ಯದರ್ಶಿ ಸಿ ಆನಂದ್ ಹಾಗೂ ಇತರರು ಹಾಜರಿದ್ದರು.