ಕೂಡ್ಲಿಗಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿಂದು ಕೊರೊನಮ್ಮಾ ಪೂಜೆ

ಕೂಡ್ಲಿಗಿ.ಜೂ. 8: – ಕೊರೋನಾ ಮಹಾಮಾರಿಯಿಂದ ದೇಶವೇ ಬೆಚ್ಚಿಬಿದ್ದಿದ್ದು ಎರಡನೇ ಅಲೆಯಿಂದ ಮಹಾಮಾರಿಗೆ ಸಾವು ನೋವಿನ ಪ್ರಮಾಣ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ದೇವರ ಮೊರೆ ಹೋದ ಗ್ರಾಮೀಣ ಭಾಗದ ಜನತೆ ಹೋಳಿಗೆ ಮೊಸರನ್ನ ಎಡೆ ಮಾಡಿ ಕೊರೋನಾ ತೊಲಗಿಸಲು ಕೊರೊನಮ್ಮಾ ಪೂಜೆಯನ್ನು ತಾಲೂಕಿನ ವಿವಿಧ ಹಳ್ಳಿಗಳಲ್ಲಿಂದು ಆಚರಿಸುತ್ತಿದ್ದು ಮಹಾಮಾರಿ ಬೇಗ ತೊಲಗಲಿ ಪ್ರತಿಯೊಬ್ಬರೂ ಆರೋಗ್ಯ ಜೀವನ ನಡೆಸಲಿ ಎಂಬುದೇ ಈ ಕೊರೋನಾಮ್ಮ ಪೂಜೆ ವಿಶೇಷವಾಗಿದೆ.