ಕೂಡ್ಲಿಗಿ ತಾಲೂಕಾದ್ಯಂತ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.6 :-  ಪಟ್ಟಣ ಸೇರಿ ತಾಲೂಕಾದ್ಯಂತ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಬುಧವಾರ ಚುನಾವಣಾ ನಿಮಿತ್ತ ನೀತಿಸಂಹಿತೆ ಇರುವುದರಿಂದ  ಸರಳವಾಗಿ ಆಚರಿಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಡಾ.ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ತಹಸೀಲ್ದಾರ್ ಟಿ.ಜಗದೀಶ್ ಮಾತನಾಡಿ,  ಬಡತನದಲ್ಲಿ ಹುಟ್ಟಿ ಬೆಳೆದ ಡಾ.ಬಾಬು ಜಗಜೀವನರಾಮ್ ಅವರು ಸಮಾನತೆಗಾಗಿ ಶ್ರಮಿಸಿದವರು. ಅಲ್ಲದೆ, ರಾಜಕೀಯದಲ್ಲಿ ಮಾಜಿ ಉಪ ಪ್ರಧಾನಿಯಾಗಿದ್ದ ಡಾ.ಬಾಬೂಜಗಜೀವನರಾಂರವರು ರೈತರ ಬದುಕು ಹಸನಾಗಿರಲು ಹಸಿರು ಕ್ರಾಂತಿಯನ್ನು ಜಾರಿಗೆ ತರುವ ಮೂಲಕ ಹಸಿರು ಕ್ರಾಂತಿ ಹರಿಕಾರರೆಂಬ ಖ್ಯಾತಿ ಗಳಿಸಿದವರು. ಅವರ ತತ್ವ, ಆದರ್ಶಗಳು ನಮಗೆಲ್ಲಾ ದಾರಿದೀಪವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲಹಳ್ಳಿ ಎಚ್.ಬಸಪ್ಪ, ವಕೀಲ ಡಿ.ಎಚ್.ದುರುಗೇಶ್, ಪಪಂ ನಾಮನಿರ್ದೇಶಿತ  ಸದಸ್ಯ ಬಂಡೆ ರಾಘವೇಂದ್ರ, ಮಾಜಿ ಯೋಧ ರಮೇಶ್, ಶಿವರಾಜ, ಹೆಗ್ಡಾಳ್ ಮಹೇಶ್, ಸಾಸಲವಾಡ ಶಿವಣ್ಣ, ನಿವೃತ್ತ ಉಪ ತಹಸೀಲ್ದಾರ್ ಸಿದ್ದಪ್ಪ, ಸಾಲುಮನಿ ರಾಘವೇಂದ್ರ,  ತಾಪಂ ಇಒ ವೈ.ರವಿಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ್ ದಿಗಡೂರು, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಾಲ್ತೂರು ಶಿವರಾಜ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು, ತಹಸಿಲ್ ಕಚೇರಿ ಸಿಬ್ಬಂದಿ ಇದ್ದರು.