ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರಗೆ ಕುಣಿಗಲ್ ಗೆ ವರ್ಗಾವಣೆ.

ಕೂಡ್ಲಿಗಿ.ಮೇ. 19:- ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರಗೆ ತುಮಕೂರು ಜಿಲ್ಲೆಯ ಕುಣಿಗಲ್ ಗೆ ವರ್ಗಾವಣೆಯಾಗಿದ್ದು ಇಂದು ಕೂಡ್ಲಿಗಿಯಿಂದ ನಿಯುಕ್ತಿ ಹೊಂದಿವಂತೆ ಹಾಗೂ ಆ ಸ್ಥಾನಕ್ಕೆ ಕೊಟ್ಟೂರು ತಹಸೀಲ್ದಾರ್ ಜಿ.ಅನಿಲ್ ಕುಮಾರ ನನ್ನು ಪ್ರಭಾರಿಯಾಗಿ ನೋಡಿಕೊಳ್ಳಲು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲೀಪಾಟಿ ಇಂದು ಆದೇಶಿಸಿದ್ದಾರೆ. ಮಹಾಬಲೇಶ್ವರ ಕೂಡ್ಲಿಗಿ ತಹಸೀಲ್ದಾರ್ ರಾಗಿ 2ವರ್ಷಗಳಿಂದ ಸೇವೆ ಸಲ್ಲಿಸಿದ್ದು ಕೋವಿಡ್ ಹಾಗೂ ಇತರೆ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು ಸರ್ಕಾರವು ಇವರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಕೂಡ್ಲಿಗಿಯಿಂದ ಕುಣಿಗಲ್ ಗೆ ವರ್ಗಾವಣೆ ಮಾಡಿ ಸ್ಥಳ ನಿಯುಕ್ತಿಗೊಳಿಸುವಂತೆ ಹಾಗೂ ಸದರಿ ಹುದ್ದೆಯನ್ನು ಕೂಡ್ಲಿಗಿ ತಹಸೀಲ್ದಾರ್ ರಾಗಿ ಹೆಚ್ಚುವರಿ ಪ್ರಭಾರಿಯನ್ನು ಕೊಟ್ಟೂರು ತಹಸೀಲ್ದಾರ್ ಜಿ.ಅನಿಲಕುಮಾರಗೆ ವಹಿಸಿಕೊಳ್ಳುವಂತೆ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಿಪಾಟಿ ಆದೇಶ ಹೊರಡಿಸಿದಂತೆ ಇಂದು ಮಧ್ಯಾಹ್ನ ಕೂಡ್ಲಿಗಿ ತಹಸೀಲ್ದಾರ್ ರಾಗಿದ್ದ ಮಹಾಬಲೇಶ್ವರರನ್ನು ತಾಲೂಕು ಸರ್ಕಾರಿ ನೌಕರರ ಸಂಘ ಸೇರಿದಂತೆ ಕೆಲ ಅಧಿಕಾರಿಗಳು ಮತ್ತು ತಾಲೂಕು ಕಚೇರಿ ಸಿಬ್ಬಂದಿ ವರ್ಗ ಹೂಗುಚ್ಛನೀಡಿ ಸನ್ಮಾನಿಸಿ ಬಿಳ್ಕೊಟ್ಟರು ಮತ್ತು ಕೂಡ್ಲಿಗಿ ತಹಸೀಲ್ದಾರ್ ರಾಗಿ ಪ್ರಭಾರಿ ವಹಿಸಿಕೊಳ್ಳುವ ಅನಿಲಕುಮಾರಗೆ ಸ್ವಾಗತ ಕೋರಿದರು.