ಕೂಡ್ಲಿಗಿ : ತಹಸೀಲ್ದಾರ್ ಗೆ ಪೇಟ ತೊಡಿಸಿ ಹೊಸ ವರ್ಷ ಆಚರಿಸಿದ ಸಿಬ್ಬಂದಿ

ಕೂಡ್ಲಿಗಿ.ಜ.4:- ಸುಮಾರು 25ಕ್ಕೂ ಹೆಚ್ಚು ತಾಲೂಕು ಕಚೇರಿ ಸಿಬ್ಬಂದಿ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರಗೆ ಪೇಟ ತೊಡಿಸಿ ಶಾಲು ಹಾರ ಹಾಕಿ ಸನ್ಮಾನಮಾಡಿ ಶುಕ್ರವಾರ ಬೆಳಿಗ್ಗೆ ಹೊಸ ವರ್ಷದ ಶುಭಾಶಯ ಕೋರಿದರು.
ಸಿಬ್ಬಂದಿ ಸನ್ಮಾನ ಸ್ವೀಕರಿಸಿದ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿ ತಮ್ಮ ಜೀವದ ಅಂಗು ತೊರೆದು ಕೊರೋನಾ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸಿದ್ದು ಶ್ಲ್ಯಾಘನೀಯವಾಗಿದ್ದು 2021ರ ಈ ವರ್ಷ ಎಲ್ಲರಿಗೂ ಅರೋಗ್ಯ ಕಾಪಾಡಲಿ ಎಂದರು. ಜನರಿಗೆ ಅರೋಗ್ಯ ಜಾಗೃತಿ ಮೂಡಿಸುವ ಜೊತೆಗೆ ನಿಮ್ಮಗಳ ಆರೋಗ್ಯ ಕಾಪಾಡಿಕೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರೇಡ್ -2 ತಹಸೀಲ್ದಾರ್, ಶಿರಸ್ತೇದಾರರು, ಕಂದಾಯನಿರೀಕ್ಷಕರು, ಗ್ರಾಮಲೆಕ್ಕಿಗರು ಹಾಗೂ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.