ಕೂಡ್ಲಿಗಿ ಡಿವೈ ಎಸ್ ಪಿ ಗೆ ಹೊಸ ಸ್ಕಾರ್ಪಿಯೋ ವಾಹನ.

ಕೂಡ್ಲಿಗಿ.ಜ.5:- ಯಾರೇ ಗಣ್ಯಾತಿಗಣ್ಯರು ಬಂದರು ಜಿಂದಾಲ್ ವಿಮಾನ ನಿಲ್ದಾಣದ ಮೂಲಕ ಬಂದೊಗುತ್ತಾರೆ ಈ ವ್ಯಾಪ್ತಿಯ ಕೂಡ್ಲಿಗಿ ಡಿವೈಎಸ್ ಪಿ ವಾಹನ ಹಳೆಯದಾಗಿದ್ದನ್ನು ಕಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ್ಲಿಗಿ ಪೊಲೀಸ್ ಉಪ ವಿಭಾಗದ ಅಧೀಕ್ಷಕರಿಗೆ ಸೋಮವಾರ ನೂತನ ಸ್ಕಾರ್ಪಿಯೋ ವಾಹನ ನೀಡಿದ್ದಾರೆ.
ಕೂಡ್ಲಿಗಿ ಪೊಲೀಸ್ ಉಪ ವಿಭಾಗಕ್ಕೆ ಕೂಡ್ಲಿಗಿ, ಗುಡೇಕೋಟೆ, ಸಂಡೂರು, ತೋರಣಗಲ್ಲು., ಗಾದಿಗನೂರು, ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಗಳು ಸೇರುತ್ತಿದ್ದು ಹೆಚ್ಚಾಗಿ ಹೈವೇ ವ್ಯಾಪ್ತಿ ಒಳಗೊಂಡಿದ್ದು ಮತ್ತು ಜಿಂದಾಲ್ ಕಾರ್ಖಾನೆ ಸಹ ಈ ಉಪವಿಭಾಗದ ವ್ಯಾಪ್ತಿಗೆ ಸೇರಲಿದೆ ಮತ್ತು ದೇಶದ ಗಣ್ಯಾತಿಗಣ್ಯರು ವಿಮಾನದ ಮೂಲಕ ಐತಿಹಾಸಿಕ ಹಂಪೆ ವೀಕ್ಷಣೆ ಇತರೆ ಯಾವುದೇ ಕಾರ್ಯಕ್ಕೆ ಭೇಟಿ ಕೊಟ್ಟರು ಅವರ ಬಂದೋಬಸ್ತ್ ರಕ್ಷಣಾ ಕಾರ್ಯದ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಅಲ್ಲದೆ ಯಾವುದೇ ಘಟನೆಯಾದರೂ ತಕ್ಷಣ ಭೇಟಿ ನೀಡಲು ಇದ್ದ ಲಕ್ಷಕ್ಕೂ ಅಧಿಕ ಕಿಲೋಮೀಟರ್ ಸಂಚಾರವಾಗಿರುವ ಹಳೆಯದಾಗಿದ್ದ ಬೊಲೊರೋ ವಾಹನಕ್ಕೆ ಮುಕ್ತಿ ಕಲ್ಪಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡ್ಲಿಗಿ ಪೊಲೀಸ್ ಉಪ ವಿಭಾಗಕ್ಕೆ ನೂತನ ಸ್ಕಾರ್ಪಿಯೋ ವಾಹನ ನೀಡಿದ್ದಾರೆ.