ಕೂಡ್ಲಿಗಿ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ  ದಾಳಿ,ಐದು ಪ್ರತ್ಯೇಕ ಮಟ್ಕಾ ಜೂಜಾಟ ಪ್ರಕರಣ ದಾಖಲು

.ಸಂಜೆವಾಣಿ ವಾರ್ತೆಕೂಡ್ಲಿಗಿ. ಆ 10 :- ಕೂಡ್ಲಿಗಿ ಪೊಲೀಸ್ ಉಪವಿಭಾಗದ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ ಮಂಗಳವಾರ ಉಪವಿಭಾಗದ ಗುಡೇಕೋಟೆ, ಕೂಡ್ಲಿಗಿ, ಕೊಟ್ಟೂರು, ಮರಿಯಮ್ಮನಹಳ್ಳಿ ಹಗರಿಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಐದು ಪೊಲೀಸ್  ಠಾಣೆಯ ಅಲ್ಲಿನ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ  ಏಳು ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 695ರೂ ಜಪ್ತಿ ಮಾಡಿಕೊಂಡಿರುವ ಆರು ಪ್ರತ್ಯೇಕ ಪ್ರಕರಣ ದಾಖಲಾಗಿರುವ ಘಟನೆ ಮಂಗಳವಾರ ಜರುಗಿವೆ.ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ ಅವರ ಮಾರ್ಗದರ್ಶನದಲ್ಲಿ ಗುಡೇಕೋಟೆ ಠಾಣಾ ಸರಹದ್ದಿನ ತಿಮ್ಮನಹಳ್ಳಿ ಗ್ರಾಮದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮಾಹಿತಿ ಆಧಾರಿಸಿದ ಪಿಎಸ್ಐ ಮಾಲಿಕ್ ಸಾಬ್ ಕಿಲಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಅವರ ಬಳಿ ಇದ್ದ 1995ರೂ ಜಪ್ತಿ ಮಾಡಿದ್ದಾರೆ.ಅದೇ ರೀತಿಯಾಗಿ ಹಗರಿಬೊಮ್ಮನಹಳ್ಳಿ ಠಾಣಾ ಪಿಎಸ್ಐ ಸರಳಾ ಹಾಗೂ ಸಿಬ್ಬಂದಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಮುಂದಿನ ರಸ್ತೆಯಲ್ಲಿ ಮಟ್ಕಾ ಜೂಜಾಟದ ಓರ್ವನನ್ನು ವಶಕ್ಕೆ ಪಡೆದು ಆತನಿಂದ 2100ರೂ ಜಪ್ತಿ ಮಾಡಿದ್ದಾರೆ.ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯ ಅಮರದೇವರಗುಡ್ಡ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯ ಮೇಲೆ ಕೂಡ್ಲಿಗಿ ಪಿಎಸ್ಐ ಧನುಂಜಯ ಹಾಗೂ ಸಿಬ್ಬಂದಿ ದಾಳಿ ನಡೆಸಿ ಓರ್ವ ನನ್ನು ವಶಕ್ಕೆ ಪಡೆದು ಆತನಿಂದ 480ರೂ ಜಪ್ತಿ ಮಾಡಿಕೊಂಡಿದ್ದಾರೆ ಪ್ರಕರಣ ದಾಖಲಾಗಿದೆ.ಮರಿಯಮ್ಮನಹಳ್ಳಿ ಪಿಎಸ್ಐ ಮೌನೇಶ್ ರಾಥೋಡ್ ಹಾಗೂ ಸಿಬ್ಬಂದಿ ಮಂಗಳವಾರ ಠಾಣಾ ವ್ಯಾಪ್ತಿಯ ಗೂಂಡಾ ಗ್ರಾಮದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿ ಮೇಲೆ ದಾಳಿ ನಡೆಸಿ ಆತನಿಂದ 600ರೂ ಜಪ್ತಿ ಮಾಡಿಕೊಂಡಿದ್ದು  ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.ಅದೇ ರೀತಿಯಾಗಿ ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿರಬಿ ಹಾಗೂ ದೂಪಾದಹಳ್ಳಿ ಗ್ರಾಮದಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪ್ರತ್ಯೇಕ ದಾಳಿ ನಡೆಸಿದ ಕೊಟ್ಟೂರು ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿ ಇಬ್ಬರನ್ನು ಬಂಧಿಸಿ ಅವರಿಂದ 720ರೂ ಹಾಗೂ 900ರೂ ಜಪ್ತಿ ಮಾಡಿರುವ ಘಟನೆ ಮಂಗಳವಾರ ಜರುಗಿದೆ. ಎಂದು ವಿಜಯನಗರ  ಪೊಲೀಸ್ ಜಿಲ್ಲಾ ಅಧಿಕ್ಷಕರಾದ ಶ್ರೀಹರಿಬಾಬು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.