ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ. 30 :- ಜೆಸಿಐ ಕೂಡ್ಲಿಗಿ ಗೋಲ್ಡನ್ ನ ಮಾಜಿ ಅಧ್ಯಕ್ಷ (2017) ಸಹೃದಯ ಮೃದುಭಾಷಿ ಸ್ನೇಹಜೀವಿ ಕೂಡ್ಲಿಗಿ ಪಟ್ಟಣದ 8ನೇ ವಾರ್ಡಿನ ಕುಶಾಲಶೆಟ್ಟಿ (49) ಹೃದಯಾಘಾತದಿಂದ ಬೆಂಗಳೂರಿನ ಸೆಂಟ್ ಮಾರ್ಥ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಇಂದು ನಸುಕಿನಜಾವ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
20 ವರ್ಷದ ಹಿಂದೆ ಮಾಷಾ ಅಲ್ಲಾ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್ ಆಗಿದ್ದ ಇವರು ಕೂಡ್ಲಿಗಿ ತಮ್ಮ ಗೆಳೆಯರ ಬಳಗದಲ್ಲಿ ಜೆಸಿಐ ಸಂಸ್ಥೆಯ ಪದಾಧಿಕಾರಿಯಾಗಿದ್ದ ಕುಶಾಲಶೆಟ್ಟಿ 2017ರಲ್ಲಿ ಜೆಸಿಐ ಕೂಡ್ಲಿಗಿ ಗೋಲ್ಡನ್ ಅಧ್ಯಕ್ಷರಾಗಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಇವರು ಕೂಡ್ಲಿಗಿಯಲ್ಲಿ ನಡೆಯುತ್ತಿದ್ದ ಚಿಂತನ ಚೇತನ ಕಾರ್ಯಕ್ರಮದಲ್ಲಿ ತೆರೆಮರೆಯ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದರು ಯಾರನ್ನು ದ್ವೇಷಿಸದ ಸಹೃದಯಿ ಮೃದುಭಾಷಿಯಾಗಿ ಸದಾ ಹಸನ್ಮುಖಿಯಾಗಿದ್ದರು. ಅನ್ಯ ಕಾರ್ಯ ನಿಮಿತ್ತ ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಹೋದಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಎದೆ ನೋವು ಕಾಣಿಸಿಕೊಂಡಾಗ ತಮಿಳುನಾಡಿನ ಕೊಯಮತ್ತೂರುನಲ್ಲಿ ಕಣ್ಣಿನ ತಜ್ಞರಾಗಿರುವ ಸಹೋದರ ನಾಗಭೂಷಣ ಅವರಿಗೆ ಕರೆ ಮಾಡಲಾಗಿ ತಕ್ಷಣ ಆತನನ್ನು ಶನಿವಾರ ಬೆಳಿಗ್ಗೆ ಬೆಂಗಳೂರಿನ ಸೆಂಟ್ ಮಾರ್ಥ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನಡೆಸಿದ ವೈದ್ಯರು ಹೃದಯದಲ್ಲಿ ಆಗಿರುವ ತೊಂದರೆ ಬಗ್ಗೆ ತಿಳಿಸಿದ್ದಾರೆ ನಂತರ ಚಿಕಿತ್ಸೆ ನಡೆಸಲಾಯಿತಾದರೂ ಚೇತರಿಕೆ ಕಾಣದ ಕುಶಾಲಶೆಟ್ಟಿ ಅವರು ಕೋಮಸ್ಥಿತಿಯಲ್ಲಿದ್ದರು ನಂತರ ಇಂದು ನಸುಕಿನ ಜಾವ ಎರಡು ಘಂಟೆ ಸುಮಾರಿಗೆ ಅವರು ನಿಧನರಾದ ಸುದ್ದಿ ತಿಳಿದು ಕೂಡ್ಲಿಗಿ ಜೆಸಿಐ ಗೆಳೆಯರ ಬಳಗ, ಮೈದಾನ ಗೆಳೆಯರ ಬಳಗ, ಚಿಂತನ ಚೇತನ ಕಾರ್ಯಕ್ರಮದ ಪದಾಧಿಕಾರಿಗಳು, ಸ್ವೀಟ್ ಮೆಮೊರಿಸ್ ಗುಂಪಿನ ಗೆಳೆಯರ ಬಳಗದವರು ಕಂಬನಿ ಮಿಡಿದಿದ್ದಾರೆ. ಇಂದು ಬೆಳಿಗ್ಗೆ ಕೂಡ್ಲಿಗಿ ಅವರ ಮನೆಗೆ ಮೃತದೇಹ ತರಲಾಗಿ ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.