ಕೂಡ್ಲಿಗಿ : ಚಿರತೆಗೆ ಬಲಿಯಾದ ಮೇಕೆ.

ಕೂಡ್ಲಿಗಿ. ಡಿ. 30:- ಪಟ್ಟಣ ಪಂಚಾಯತಿ ವ್ಯಾಪ್ತಿಯ ಕೆರೆಕಾವಲರಹಟ್ಟಿ ಹೊರವಲಯದಲ್ಲಿ ಕರಡಿ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿರುವ ಸುದ್ದಿ ತಿಳಿದ ಮರು ದಿನವೇ ಕೂಡ್ಲಿಗಿ ದೊಡ್ಡ ಕೆರೆ ಸಮೀಪದಲ್ಲಿ ಚಿರತೆಯೊಂದು ಮೇಕೆಯನ್ನು ಬಲಿ ತೆಗೆದುಕೊಂಡ ಘಟನೆ ಜರುಗಿದ್ದು ಗ್ರಾಮದ ಜನತೆ ಎರಡು ಪ್ರಾಣಿಗಳ ದರ್ಶನದಿಂದ ಭಯಭೀತರಾಗಿದ್ದಾರೆ. ಸೋಮವಾರ ಬೆಳಿಗ್ಗೆಯಷ್ಟೇ ಕರಡಿಯೊಂದು ಬಹಿರ್ದೆಸೆಗೆ ಹೋಗಿದ್ದವರ ಮೇಲೆ ದಾಳಿ ನಡೆಸಿ ಇಬ್ಬರನ್ನು ಗಾಯಗೊಳಿಸಿದ ಸುದ್ದಿ ಮಾಸುವ ಮುನ್ನವೇ ಮರುದಿನ(ನಿನ್ನೆ ) ಮಧ್ಯಾಹ್ನ ಕೆರೆಕಾವರಹಟ್ಟಿಯ ಹೊರವರಲಯದ ಕೂಡ್ಲಿಗಿ ದೊಡ್ಡ ಕೆರೆ ಸಮೀಪವೇ ಹಾಡುಹಗಲೇ ಚಿರತೆಯೊಂದು ಮೆಯ್ಯುತ್ತಿದ್ದ ಸಣ್ಣನಾಗಪ್ಪ ಎಂಬಾತನ ಮೇಕೆ ಮೇಲೆ ದಾಳಿಮಾಡಿ ಬಲಿ ತೆಗೆದುಕೊಂಡಿದೆ ನಂತರ ಜನರ ಕೂಗಾಟದಿಂದ ಓಡಿಹೋಗಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ : ಚಿರತೆಯು ಮೇಕೆಯನ್ನು ಬಲಿ ತೆಗೆದುಕೊಂಡ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು ಜನರು ಚಿರತೆ,ಯು ಆಗಾಗ ಕಾಣಿಸಿಕೊಳ್ಳುತ್ತಿದ್ದು ಕುರಿ ಮೇಕೆ ಹಾಗೂ ನಾಯಿಗಳನ್ನು ಬಲಿ ತೆಗೆದುಕೊಂಡಿದ್ದು ಮುಂದೆ ಮನುಷ್ಯರ ಮೇಲೆ ದಾಳಿ ಮಾಡುವ ಮುನ್ನವೇ ಚಿರತೆ ಹಾಗೂ ಕರಡಿಯನ್ನು ಹಿಡಿದು ಸಾಗಿಸಿ ಜನತೆಯ ಭಯದ ಭೀತಿ ಹೋಗಲಾಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೆ.